ಮೈಸೂರು: ರಸ್ತೆ ದಾಟುವಾಗ ಕೋತಿಯೊಂದು ಅಪಘಾತದಿಂದ ಮೃತಪಟ್ಟಿದ್ದರೂ ಕೂಡ, ಅದನ್ನು ರಸ್ತೆ ಬದಿಯ ಪಕ್ಕ ಹಾಕಿ ಹೋಗದಷ್ಟು ಮಾನವೀಯತೆಯನ್ನು ಸವಾರರು ಮರೆತು ಹೋಗಿದ್ದಾರೆ.
ಮೈಸೂರು - ನಂಜನಗೂಡು ರಸ್ತೆಯಲ್ಲಿರುವ ಕಡಕೋಳ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಡುವಾಗ ಕೋತಿಯೊಂದು ಅಪಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿದೆ. ಇದನ್ನು ನೋಡಿಕೊಂಡು ಮೈಸೂರಿನಿಂದ ನಂಜನಗೂಡು, ಗುಂಡ್ಲುಪೇಟೆ, ಊಟಿ, ಕೇರಳ ತೆರಳುವ ಅದೆಷ್ಟೋ ವಾಹನಗಳು ತೆರಳಿವೆ. ಆದರೆ ಯಾರೊಬ್ಬರೂ ಕೋತಿಯನ್ನು ರಸ್ತೆಯ ಬದಿಗೆ ಹಾಕಿ ಹೋಗುವ ಮನಸ್ಸು ಮಾಡಲಿಲ್ಲ.