ಮೈಸೂರು: ಅವಧೂತ ಗಣಪತಿ ಸಚ್ಚಿದಾನಂದ ಆಶ್ರಮದ ಪೀಠಾಧಿಪತಿ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 80ನೇ ಹುಟ್ಟಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲಿ ಶುಭ ಕೋರಿದ್ದಾರೆ. ವಚು೯ವಲ್ ಲೈವ್ ಮೂಲಕ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರ ನಿರ್ಮಾಣದಲ್ಲಿ ಮಠಗಳ ಪಾತ್ರ ಬಹು ಮುಖ್ಯವಾಗಿದೆ. ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳಿಗೆ ಒಳ್ಳೆಯದಾಗಲಿ. ನಾನು ಕೂಡ ಅವರ ಅನುಯಾಯಿಯಾಗಿದ್ದೇನೆ. ಸ್ವಾಮೀಜಿಗಳು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂದರು.
ನಮ್ಮ ಪರಂಪರೆಯನ್ನು ಇಂದಿನ ಯುವ ಪೀಳಿಗೆಗೆ ಸಾರುವ ಕೆಲಸವನ್ನು ಇಂತಹ ಮಠಗಳು ಮಾಡುತ್ತಿವೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದಂತೆ ದೇಶ ಸಾಗುತ್ತಿದೆ. ನಮ್ಮ ಮುಂದೆ ಮುಂದಿನ 25 ವರ್ಷದ ರೂಪುರೇಷೆಯಿದೆ. ಈ ರೂಪುರೇಷೆಯ ಕಾರ್ಯರೂಪಕ್ಕೆ ತರಲು ಇಂತಹ ಮಠಗಳ ಸಹಕಾರ ಮುಖ್ಯ. ರಾಷ್ಟ್ರದ ಅಭಿವೃದ್ಧಿಯಲ್ಲಿ ಮಠಮಂದಿರಗಳು ಸಲಹೆ ಹಾಗೂ ಮಾರ್ಗದರ್ಶನ ನೀಡುತ್ತಿವೆ ಎಂದು ಹೇಳಿದರು.
ಈ ಹಿಂದೆ ದತ್ತಪೀಠಕ್ಕೆ ಬರುವ ಅವಕಾಶ ಲಭಿಸಿತ್ತು. ಆ ಸಮಯದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದಿರಿ. ಆದರೆ ಕಾಯಕ್ರಮ ನಿಮಿತ್ತ ನಾನು ಜಪಾನಿಗೆ ಹೋಗಬೇಕಾದ್ರಿಂದ ಶ್ರೀಗಳ ಹುಟ್ಟುಹಬ್ಬದ ಕಾಯಕ್ರಮದಲ್ಲಿ ಭಾಗವಹಿಸಲು ಆಗುತ್ತಿಲ್ಲ. ಶ್ರೀಗಳು ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಸಾಮಾಜಿಕ ನ್ಯಾಯದ ಪ್ರೇರಣೆಯಾಗಿ ಗಣಪತಿ ಶ್ರೀಗಳು ಕೆಲಸ ಮಾಡುತ್ತಿದ್ದಾರೆ. ದೇಶದ ನಾನಾ ಭಾಗಗಳಲ್ಲಿ ಆಶ್ರಮಗಳನ್ನು ಮಾಡಿ ಸಾಮಾಜಿಕ ಕಾರ್ಯವನ್ನು ಮಾಡುತ್ತಿದ್ದಾರೆ. ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸ್ವಾಮೀಜಿ ಕೊಡುಗೆ ಅಪಾರ ಎಂದು ಮೋದಿ ಕೊಂಡಾಡಿದರು.
ಓದಿ : ಕಾರಿನೊಳಗೆ ಸುಟ್ಟು ಕರಕಲಾದ ಯುವಜೋಡಿ: ಘಟನೆಗೂ ಮುನ್ನ ಪೋಷಕರಿಗೆ ಸಂದೇಶ ರವಾನೆ