ಮೈಸೂರು: ಮೋದಿ ಅಲೆಯಿಂದ ನೀವು ಗೆದ್ದಿರುವುದು. ಸ್ವತಂತ್ರವಾಗಿ ನಿಂತು ಕಾರ್ಪೋರೇಟರ್ ಆಗಿ ಸಾಕು ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಎಂಎಲ್ಸಿ ರಘು ಆಚಾರ್ ಬಹಿರಂಗ ಸವಾಲು ಹಾಕಿದ್ದಾರೆ.
ಇಂದು ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಮ್ಎಲ್ಸಿ ರಘು ಆಚಾರ್, ಸಂಸದ ಪ್ರತಾಪ್ ಸಿಂಹ ಮೈಸೂರು ಜಿಲ್ಲಾಧಿಕಾರಿ ಪರವಾಗಿ ಮಾತನಾಡುತ್ತಾರೆ, ಇನ್ನು ಶಾಸಕರು ವಿಧಾನ ಸಭೆಯಲ್ಲಿ ಜಿಲ್ಲಾಧಿಕಾರಿಗಳ ವಿರುದ್ದ ಹಕ್ಕುಚ್ಯುತ್ತಿ ಮಂಡಿಸಲು ಪುಸ್ತಕ ಓದಿಕೊಳ್ಳಿ ಎನ್ನುತ್ತಾರೆ. ಮೊದಲು ಪುಸ್ತಕ ಓದಿಕೊಳ್ಳಬೇಕಾದವರು ಅವರು. ಎರಡು ಬಾರಿ ಸಂಸದರಾಗಿ ಆಯ್ಕೆಯಾದರೂ ಸರಿಯಾದ ಜ್ಞಾನ ಇಲ್ಲ ಅನ್ನುವ ಹಾಗೆ ಮಾತನಾಡುತ್ತಾರೆ ಎಂದರು.
ಸಂಸದ ಆದವರು ಕೇವಲ ಬೆಂಗಳೂರು - ಮೈಸೂರು ಹೆದ್ದಾರಿ ಮಾಡುವುದು ಒಂದೇನಾ? ಎಷ್ಟು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೀರಾ? ಸಂಸದರಾಗಿ ಈ ಭಾಗಕ್ಕೆ ನಿಮ್ಮ ಕೊಡುಗೆಗಳೇನು. ಇನ್ನೊಬ್ಬರ ಬಗ್ಗೆ ಮಾತನಾಡಿದರೆ ದೊಡ್ಡವರಾಗುತ್ತೀರಾ..? ಎಂದು ಪ್ರಶ್ನಿಸಿದರು.
ಮಾತನಾಡುವ ಭರದಲ್ಲಿ ಯಾರ ಬಗ್ಗೆಯಾದರೂ ಯೋಚಿಸದೇ ಮಾತನಾಡನಾಡುವ ಸಂಸದರು ಪ್ರತಾಪ್ ಸಿಂಹ ಮಾತ್ರ , ಪ್ರತಾಪ್ ಸಿಂಹ ಗೆದ್ದಿರುವುದು ಮೋದಿ ಅಲೆಯಿಂದ. ನಿಮಗೇನಾದರೂ ವೈಯಕ್ತಿಕ ವರ್ಚಸ್ಸು ಇದೆ ಎಂದರೆ ಕಾರ್ಪೋರೆಟರ್ ಎಲೆಕ್ಷನ್ ಗೆ ನಿಂತುಕೊಳ್ಳಿ ನಾನು ಕೂಡ ಪಕ್ಷೇತರನಾಗಿ ನಿಂತುಕೊಳ್ಳುತ್ತೇನೆ ಯಾರು ಗೆಲ್ಲುತ್ತಾರೆ ನೋಡೋಣ, ಧೈರ್ಯ ಇದ್ದರೆ ಈ ಕೆಲಸ ಮಾಡಿ ಎಂದು ಎಂಎಲ್ಸಿ ರಘು ಆಚಾರ್ ಸಂಸದರಿಗೆ ಬಹಿರಂಗ ಸವಾಲ್ ಎಸೆದಿದ್ದಾರೆ.