ETV Bharat / state

ಚುನಾವಣೆಗಾಗಿ ಪ್ರಾಧಿಕಾರ ರಚಿಸುವುದು ಕೆಟ್ಟ ಟ್ರೆಂಡ್ : ಶಾಸಕ ಯತೀಂದ್ರ ಸಿದ್ದರಾಮಯ್ಯ - ವೀರಶೈವ-ಲಿಂಗಾಯತ ಪ್ರಾಧಿಕಾರ

ನಗರಸಭೆ ಹಾಗೂ ಪುರಸಭೆ ಅಧ್ಯಕ್ಷರ - ಉಪಾಧ್ಯಕ್ಷರ ಆಯ್ಕೆ ಪಟ್ಟಿಗೆ ತಡೆ ನೀಡಿರುವುದು ಏಕೆ ಅನ್ನೋದು ಗೊತ್ತಿಲ್ಲ. ಈಗ ತಡೆ ನೀಡಬಾರದಿತ್ತು. ಈಗಾಗಲೇ ಎಲ್ಲ ಕಡೆ ಚುನಾವಣೆ ನಡೆದಿದೆ. ಈ ಸಂದರ್ಭದಲ್ಲಿ ತಡೆ ನೀಡುವುದು ಸರಿಯಲ್ಲ.

MLA Yathindra Siddaramaiah opposed the authority
ಶಾಸಕ ಯತೀಂದ್ರ ಸಿದ್ದರಾಮಯ್ಯ
author img

By

Published : Nov 20, 2020, 4:29 PM IST

Updated : Nov 20, 2020, 6:32 PM IST

ಮೈಸೂರು : ಚುನಾವಣೆಗೋಸ್ಕರ ಪ್ರಾಧಿಕಾರ ಮಾಡುವುದು ಸರಿಯಲ್ಲ. ಅದು ಬಹಳ ಕೆಟ್ಟ ಟ್ರೆಂಡ್​ ಆಗಬಹುದು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ರಾಜ್ಯ ಸರ್ಕಾರ ಇತ್ತೀಚಿಗೆ ಘೋಷಿಸಿದ ಪ್ರಾಧಿಕಾರದ ಆದೇಶಗಳಿಗೆ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಮರಾಠ ಹಾಗೂ ವೀರಶೈವ - ಲಿಂಗಾಯತ ಪ್ರಾಧಿಕಾರ ಮಾಡಿದ್ದಾರೆ. ಮುಂದೆ ಕ್ರಿಶ್ಚಿಯನ್ನರು, ಜೈನರು ಕೇಳುತ್ತಾರೆ. ವಿನಾ ಕಾರಣ ಎಲ್ಲದಕ್ಕೂ ಪ್ರಾಧಿಕಾರ ರಚನೆ ಮಾಡುವುದಕ್ಕೆ ಆಗುವುದಿಲ್ಲ. ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಪ್ರಾಧಿಕಾರ ರಚಿಸಿಬೇಕೆ ವಿನಃ ಚುನಾವಣೆಗೋಸ್ಕರ ಪ್ರಾಧಿಕಾರ ಮಾಡುವುದು ಸರಿಯಲ್ಲ ಎಂದರು.

ನಗರಸಭೆ ಹಾಗೂ ಪುರಸಭೆ ಅಧ್ಯಕ್ಷರ - ಉಪಾಧ್ಯಕ್ಷರ ಆಯ್ಕೆ ಪಟ್ಟಿಗೆ ತಡೆ ನೀಡಿರುವುದು ಏಕೆ ಅನ್ನೋದು ಗೊತ್ತಿಲ್ಲ. ಈಗ ತಡೆ ನೀಡಬಾರದಿತ್ತು. ಈಗಾಗಲೇ ಎಲ್ಲ ಕಡೆ ಚುನಾವಣೆ ನಡೆದಿದೆ. ಈ ಸಂದರ್ಭದಲ್ಲಿ ತಡೆ ನೀಡುವುದು ಸರಿಯಲ್ಲ ಎಂದು ತಡೆಗೆ ಅನುಮಾನ ವ್ಯಕ್ತಪಡಿಸಿದರು.

ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಲವು ಚುನಾವಣೆಗಳನ್ನು ಗೆದ್ದಿದೆ. ಕೆಲವು ಸೋತ ಉದಾಹರಣೆಗಳೂ ಇವೆ. ಸೈದ್ಧಾಂತಿಕವಾಗಿ ನಾವೆಲ್ಲ ರಾಹುಲ್ ಗಾಂಧಿ ಅವರ ಬೆಂಬಲಕ್ಕೆ ನಿಂತಿದ್ದೇವೆ.

ಶಾಸಕ ಯತೀಂದ್ರ ಸಿದ್ದರಾಮಯ್ಯ

ಇತ್ತೀಚೆಗೆ ನಡೆದ ಎರಡೂ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಟಫ್ ಫೈಟ್ ಕೊಟ್ಟಿದೆ. ಆದರೆ, ಹಣದ ಪ್ರಭಾವದಿಂದ ಎರಡೂ ಕ್ಷೇತ್ರ ಬಿಜೆಪಿ ಪಾಲಾದವು. ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯಂತೆ ಮುಂದೆ ನಾವು ಒಗ್ಗಟ್ಟಾಗಿ ಹೋಗಬೇಕಾಗಿದೆ ಎಂದರು.

ಕೋವಿಡ್ ಲಸಿಕೆ ಬಗ್ಗೆ ಶಾಸಕರು ಹೇಳಿದ್ದೇನು?

ಈಗಾಗಲೇ ಕೋವಿಡ್ ಲಸಿಕೆ ಬಂದಿದೆ ಎಂದು ಕಂಪನಿಗಳು ಹೇಳುತ್ತಿವೆ. ಕೆಲವು ಕಂಪನಿಗಳು ಈ ತಿಂಗಳು ಬರುತ್ತದೆ, ಆ ತಿಂಗಳು ಬರುತ್ತದೆ ಎಂದು ಹೇಳಿಕೊಳ್ಳುತ್ತಿವೆ. ಸಂಪೂರ್ಣವಾಗಿ ಕೋವಿಡ್ ಲಸಿಕೆ ಟ್ರೈಯಲ್ ಆಗಿ ಡಬ್ಲ್ಯೂಹೆಚ್​ಒ ಹೇಳುವ ತನಕ ಯಾವುದನ್ನು ನಂಬುವುದಕ್ಕೆ ಹೋಗಬಾರದು. ಅದು ಬರುವ ಸಮಯಕ್ಕೆ ಬರುತ್ತದೆ. ಅದು ಬಂದಾಗ ಎಲ್ಲರಿಗೂ ಕೈಗೆಟುಕುವ ಹಾಗೆ ಸರ್ಕಾರ ನೀಡಬೇಕೆಂದು ಅಭಿಪ್ರಾಯಪಟ್ಟರು.

Last Updated : Nov 20, 2020, 6:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.