ಮೈಸೂರು : ಬಸವರಾಜ ಬೊಮ್ಮಾಯಿಯವರು ಕ್ರಿಕೆಟ್ ಕ್ಯಾಪ್ಟನ್ ಆಗಿದ್ದಾರೆ. ತಮ್ಮ ಮ್ಯಾಚ್ ಗೆಲ್ಲಬೇಕು ಅಷ್ಟೇ.. ಪಿಚ್ ವಾತಾವರಣ ನೋಡಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಶಾಸಕ ಎಸ್ ಎ ರಾಮದಾಸ್ ಹೇಳಿದರು.
ನಗರದ ಕಾಮಾಕ್ಷಿ ಆಸ್ಪತ್ರೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ಭಾಗಕ್ಕೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅನ್ನೋದು ಸಿಎಂಗೆ ಗೊತ್ತಿದೆ. ಅದರ ಬಗ್ಗೆ ಯಾರೂ ಹೇಳುವ ಅವಶ್ಯಕತೆ ಇಲ್ಲ. ಯಾಕೆ ಕೊಟ್ಟಿಲ್ಲ ಅನ್ನೋದನ್ನು ಅವರೇ ಹೇಳಬೇಕು ಎಂದರು.
ಯಾವ ಆಟಗಾರರು ಬೇಕು ಅವರನ್ನು ಕ್ಯಾಪ್ಟನ್ ಆಯ್ಕೆ ಮಾಡಿಕೊಳ್ಳಬೇಕು. ಈಗ ಬಸವರಾಜ ಬೊಮ್ಮಾಯಿಯವರು ಕ್ಯಾಪ್ಟನ್ ಆಗಿದ್ದಾರೆ. ಯಾರ ಸಲಹೆ ಪಡೆಯಬೇಕು ಎಂದು ಅವರಿಗೆ ಗೊತ್ತಿದೆ. ತಮ್ಮ ಮ್ಯಾಚ್ ಗೆಲ್ಲಬೇಕು ಅಷ್ಟೇ.. ಪಿಚ್ ವಾತಾವರಣ ನೋಡಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.
ನಾನು ಸಿಎಂಗೆ ಪತ್ರ ಕೊಟ್ಟು ಬಂದಿದ್ದೇನೆ. ಅದನ್ನು ಕೊನೆಯವರೆಗೂ ಓದಲು ಮನವಿ ಮಾಡಿದ್ದೇನೆ. ಕೆಟ್ಟದಿರಬಹುದು, ಒಳ್ಳೆಯದಿರಬಹುದು, ನೋವಾಗಬಹುದು. ಆದರೆ, ಅದು ರಾಜ್ಯದ ಹಿತದೃಷ್ಟಿಯಿಂದ ಅದನ್ನು ಬರೆದಿದ್ದೇನೆ. ಯಾವ ಪ್ರಮುಖವಾದ ಅಂಶಗಳನ್ನು ಪತ್ರದಲ್ಲಿ ಬರೆಯಬೇಕಾಗಿತ್ತೋ ಅದನೆಲ್ಲವನ್ನೂ ಬರೆದಿದ್ದೇನೆ ಎಂದರು.
ಓದಿ: 'ನನಗಿಷ್ಟವಾದ ಮುಜರಾಯಿ ಖಾತೆಯನ್ನೇ ನೀಡಿದ್ದಾರೆ, ಯಾವುದೇ ಅಸಮಾಧಾನವಿಲ್ಲ'
2023ರ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಜನರ ಭಾವನೆಗೆ ತಕ್ಕಂತೆ ಕೆಲಸ ಮಾಡಲು ಸೂಚಿಸಿದ್ದೇನೆ. ಯಾವುದೇ ಸಲಹೆ ಬೇಕಾದರೂ ಕೊಡಲು ನಾನು ಸಿದ್ಧನಾಗಿದ್ದೇನೆ ಎಂದರು.