ಮೈಸೂರು: ನಿರಂತರ ಮಳೆಯಿಂದ ಕುಸಿದು ಬಿದ್ದಿರುವ ಚಾಮುಂಡಿ ಬೆಟ್ಟದ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆಲ ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಚಾಮುಂಡೇಶ್ವರಿ ಬೆಟ್ಟದಲ್ಲಿರುವ ನಂದಿ ವಿಗ್ರಹದ ಮಾರ್ಗದಲ್ಲಿ ರಸ್ತೆ ಕುಸಿದು ಬಿದ್ದಿದ್ದು. 20 ಅಡಿ ಆಳದಷ್ಟು ರಸ್ತೆ ಕುಸಿದು ಬಿದ್ದಿರುವುದರಿಂದ ಈ ಮಾರ್ಗದ ರಸ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಸ್ಥಳ ಪರಿಶೀಲನೆ ನಡೆಸಿ, ಗುಣಮಟ್ಟ ಹಾಗೂ ಶಾಶ್ವತವಾಗಿ ಉಳಿಯುವಂತೆ ರಸ್ತೆ ನಿರ್ಮಾಣ ಮಾಡಿ ಎಂದು ಲೋಕೋಪಯೋಗಿ ಇಲಾಖೆ ಎಇಇ ಅವರಿಗೆ ಸೂಚನೆ ನೀಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಂದಿ ವಿಗ್ರಹ ಬಳಿ ಕುಸಿದಿರುವ ರಸ್ತೆಯನ್ನು ಬೇಗನೆ ತ್ವರಿತವಾಗಿ ಕೆಲಸ ಮಾಡಲಾಗುವುದು ಎಂದರು.
ಇದಕ್ಕೆ ಕೆಬಿಎನ್ ವಾಲ್ ಎಂಬ ಕಂಬಿಯನ್ನು ಕಟ್ಟಿ ಇಲ್ಲಿ ವ್ಯವಸ್ಥಿತವಾಗಿ ಗೋಡೆಯನ್ನು ಕಟ್ಟಲಾಗುವುದು ,ಅಲ್ಲದೇ ಉತ್ತಮವಾದ ತಂತ್ರಜ್ಞಾನವನ್ನು ಅಳವಡಿಸಲಾಗುವುದು, ತುಂಬಾ ಆಳವಾದ ತಿರುವುಗಳಲ್ಲಿ ಇದು ಸಂಭವಿಸಿರುವುದರಿಂದ ಹೆಚ್ಚಿನ ಗಮನ ಹರಿಸಿ ಆದ್ಯತೆ ನೀಡಲಾಗುವುದು ಎಂದರು.