ETV Bharat / state

ಜುಬಿಲಿಯಂಟ್ ಕಾರ್ಖಾನೆಗೆ ಭೇಟಿ ಸಚಿವ ಸೋಮಣ್ಣ ಭೇಟಿ, ಪರಿಶೀಲನೆ

ಜುಬಿಲಿಯಂಟ್ ಕಾರ್ಖಾನೆಯಲ್ಲಿ 12 ಮಂದಿಗೆ ಕೋವಿಡ್-19 (ಕೊರೊನಾ ವೈರಸ್) ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಔಷಧಿ ಸಿಂಪಡಣೆ ಮಾಡುವಂತೆ ಹಾಗೂ ಸಾರ್ವಜನಿಕರು ಇತ್ತ ಕಡೆ ಸುಳಿಯದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

Minister Somanna who visited the Jubilant factory.
ಜುಬಿಲಿಯಂಟ್ ಕಾರ್ಖಾನೆಗೆ ಭೇಟಿ ನೀಡಿದ ಸಚಿವ ಸೋಮಣ್ಣ
author img

By

Published : Apr 1, 2020, 1:58 PM IST

ಮೈಸೂರು: ಜುಬಿಲಿಯಂಟ್ ಕಾರ್ಖಾನೆಯಲ್ಲಿ 12 ಮಂದಿಗೆ ಕೋವಿಡ್-19 (ಕೊರೊನಾ ವೈರಸ್) ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಂಜನಗೂಡಿನಲ್ಲಿರುವ ಕಾರ್ಖಾನೆಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾರ್ಖಾನೆಗೆ ಔಷಧಿ ಸಿಂಪಡಣೆ ಮಾಡುವಂತೆ ಹಾಗೂ ಸಾರ್ವಜನಿಕರು ಕಾರ್ಖಾನೆಯ ಬಳಿ ಬರದಂತೆ ಎಚ್ಚರಿಕೆ ವಹಿಸಿ, ಕ್ವಾರೆಂಟೈನ್ ನಲ್ಲಿರುವ ನೌಕರರ ಬಗ್ಗೆ ಹೆಚ್ಚಿನ ನಿಗಾವಹಿಸಿ ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಕಾರ್ಖಾನೆಯಲ್ಲಿ 15 ಜನ ಸೆಕ್ಯೂರಿಟಿ ಗಾರ್ಡ್‌ಗಳು ಮಾತ್ರ ಇಲ್ಲಿದ್ದು ಅವರನ್ನು ಇಲ್ಲೇ ಕ್ವಾರಂಟೈನ್ (ಪ್ರತ್ಯೇಕವಾಗಿರುವುದು) ಮಾಡಲಾಗಿದೆ. ಅವರಿಗೆ ಬೇಕಾದ ಊಟ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕ ಸಚಿವರಿಗೆ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.