ETV Bharat / state

ತೋಟದ ಮನೆಯಲ್ಲಿ ಕತ್ತು ಸೀಳಿ ವ್ಯಕ್ತಿಯ ಬರ್ಬರ ಕೊಲೆ.. ಕೆ ಆರ್​ ನಗರದಲ್ಲಿ ಹರಿಯಿತು ನೆತ್ತರು - ಮೈಸೂರಿನಲ್ಲಿ ವ್ಯಕ್ತಿಯೋರ್ವನ ಕತ್ತು ಸೀಳಿ ಕೊಲೆ

ಮೈಸೂರು ಜಿಲ್ಲೆಯಲ್ಲಿ ನೆತ್ತರು ಹರಿದಿದೆ. ವ್ಯಕ್ತಿಯೋರ್ವನ ಬರ್ಬರ ಕೊಲೆಯಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.

man-murder-in-mysore
ವ್ಯಕ್ತಿ ಕೊಲೆಯಾದ ಸ್ಥಳಕ್ಕೆ ಆಗಮಿಸಿದ ಎಸ್​ಪಿ
author img

By

Published : Feb 24, 2022, 7:38 PM IST

ಮೈಸೂರು: ವ್ಯಕ್ತಿಯೋರ್ವನನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೆ. ಆರ್ ನಗರ ತಾಲೂಕಿನ ಅರ್ಜುನ ಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.

man-murder-in-mysore
ರಮೇಶ್ ರಾಜ್ ಕೊಲೆಯಾದ ಸ್ಥಳಕ್ಕೆ ಎಸ್​ಪಿ ಭೇಟಿ ನೀಡಿ, ಪರಿಶೀಲಿಸಿದರು

ಗ್ರಾಮದ ರಮೇಶ್ ರಾಜ್ (58) ಕೊಲೆಯಾದವ. ಹಾಸನ-ಮೈಸೂರು ಹೆದ್ದಾರಿಯ ಪಕ್ಕದ ಜಮೀನಿನ ತೋಟದ ಪಂಪ್‌ಸೆಟ್ ಶೆಡ್ಡ್‌ನಲ್ಲಿ ಕೊಲೆ ಮಾಡಲಾಗಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಘಟನೆಯಿಂದ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.

man-murder-in-mysore
ವ್ಯಕ್ತಿ ಮೃತಪಟ್ಟ ಸ್ಥಳಕ್ಕೆ ಎಸ್​ಪಿ ಭೇಟಿ ನೀಡಿ ಪರಿಶೀಲಿಸಿದರು

ಕೊಲೆಯಾದ ರಮೇಶ್ ರಾಜ್ ಅವರಿಗೆ ಇಬ್ಬರು ಪತ್ನಿಯರು, ನಾಲ್ವರು ಗಂಡು ಮಕ್ಕಳು ಮತ್ತು ಓರ್ವ ಪುತ್ರಿ ಇದ್ದಾಳೆ. ಈ ಸಂಬಂಧ ರಮೇಶ್‌ರಾಜ್ ಪತ್ನಿ ಸುಧಾ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಸ್‌ಪಿ ಆರ್. ಚೇತನ್, ಡಿವೈಎಸ್‌ಪಿ ಡಾ. ಸುಮೀತ್ ಅವರು ಸ್ಥಳ ಪರಿಶೀಲಿಸಿ ಕೊಲೆ ಸಂಬಂಧ ಮಾಹಿತಿ ಪಡೆದರು. ಕೊಲೆ ಪ್ರಕರಣ ಭೇದಿಸಲು ತಂಡ ರಚಿಸಿದ್ದಾರೆ.

ಓದಿ: ರೈಲ್ವೆ ಕಾಮಗಾರಿಗಾಗಿ ತೆಗೆದಿದ್ದ ಗುಂಡಿಯಲ್ಲಿ ಮುಳುಗಿ ಮೂವರು ಮಕ್ಕಳು ಸಾವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.