ಮೈಸೂರು: ಕಪಿಲಾ ನದಿಯಲ್ಲಿ ಈಜಲು ಹೋಗಿ ನೀರಿನ ಸೆಳೆತಕ್ಕೆ ಸಿಲುಕಿದ್ದ ಮಕ್ಕಳನ್ನು ರಕ್ಷಣೆ ಮಾಡಲು ಹೋದ ತಂದಯೇ ನೀರುಪಾಲಾದ ಘಟನೆ ಸರಗೂರು ತಾಲೂಕಿನಲ್ಲಿ ನಡೆದಿದೆ.
ಮಕ್ಕಳನ್ನು ರಕ್ಷಿಸಲು ಹೋಗಿ ಮೃತಪಟ್ಟ ವ್ಯಕ್ತಿ ಜಗದೀಶ್ ಮೊದಲಿಯಾರ್ (64). ಈವರು ಹುಣಸೂರು ತಾಲೂಕಿನವರಾಗಿದ್ದು, ಇವರ ಮನೆ ದೇವರಿಗೆ ಪೂಜೆ ಸಲ್ಲಿಸಿಲೆಂದು ಕುಟುಂಬ ಸಮೇತ ಹೆಚ್.ಡಿ.ಕೋಟೆ ತಾಲೂಕಿನ ಚಿಕ್ಕದೇವಮ್ಮನ ಬೆಟ್ಟಕ್ಕೆ ಬಂದಿದ್ದರು. ಈ ವೇಳೆ ಕಪಿಲಾ ನದಿಯ ತುಂಬುಸೋಗೆ ಸೇತುವೆ ಬಳಿ ಸ್ನಾನ ಮಾಡಲೆಂದು ನದಿಗೆ ಇಳಿದಿದ್ದಾರೆ. ಇವರ ಮಗ ಹಾಗೂ ತಂಗಿಯ ಮಗ ನೀರಿನ ಸೆಳೆತಕ್ಕೆ ಸಿಲುಕಿದ್ದು, ಇವರಿವಬ್ಬರನ್ನು ರಕ್ಷಣೆ ಮಾಡಲು ಜಗದೀಶ್ ಹೋಗಿದ್ದಾರೆ. ಬಳಿಕ ಮಕ್ಕಳ್ಳಿಬ್ಬರನ್ನು ದಡಕ್ಕೆ ದೂಡಿದ ಜಗದೀಶ್, ನೀರಿನ ಸುಳಿಗೆ ಸಿಕ್ಕಿ ಕೊಚ್ಚಿ ಹೋಗಿದ್ದಾರೆ.
ಸ್ಥಳೀಯ ಈಜುಗಾರರ ಸಹಾಯದಿಂದ ಮೃತದೇಹವನ್ನು ಹೊರ ತೆಗೆದಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಹುಣಸೂರಿಗೆ ರವಾನಿಸಲಾಗುತ್ತದೆ. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಅಂತ್ಯಕ್ರಿಯೆ ನಡೆಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.