ಮೈಸೂರು : ಕಬಿನಿ ಹಿನ್ನಿರಿನ ಮೀಸಲು ಅರಣ್ಯ ಪ್ರದೇಶದಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬ ಅರಣ್ಯ ಸಿಬ್ಬಂದಿಗೆ ಹೆದರಿ ಓಡಿಹೋಗುವಾಗ ಕೇಸರಿನಲ್ಲಿ ಸಿಲುಕಿ ಹೊರಬರಲಾರದೇ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಬಿನಿ ಹಿನ್ನಿರಿನಿ ಬಳ್ಳೆ ಹಾಡಿಯ ಹಳೆಯ ಮಾಸ್ತಿ ಗುಡಿ ಬಳಿ ನಡೆದಿದೆ.
ಮಂಗಳವಾರ ಸಂಜೆ ಕಬಿನಿ ಹಿನ್ನೀರಿನ ಹಳೇ ಮಾಸ್ತಿಗುಡಿ ಬಳಿ ಮೀನು ಹಿಡಿಯಲು ಐದು ಮಂದಿ ಆದಿವಾಸಿ ಜನರು ಹೋಗಿದ್ದರು. ಈ ಪ್ರದೇಶ ನಾಗರ ಹೊಳೆ ಅರಣ್ಯದ ವ್ಯಾಪ್ತಿಯಲ್ಲಿ ಬರುತ್ತಿದ್ದು, ಈ ಪ್ರದೇಶದಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ. ಆದರೂ ಕೆಲವರು ಆ ಪ್ರದೇಶದಲ್ಲಿ ಮೀನು ಹಿಡಿಯಲು ಬರುವುದು ಸಹಜ. ಮೊನ್ನೆ ಸಂಜೆ ಸಹ ಐವರು ಮೀನು ಹಿಡಿಯಲು ತೆರಳಿದ್ದರು. ಅದೇ ಮಾರ್ಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬಂದಿದ್ದು, ಈ ಪ್ರದೇಶದಲ್ಲಿ ಮೀನು ಹಿಡಿಯುವುದು ನಿಷೇಧವಿದೆ ಎಂದು ಇವರಿಗೆ ಬೆದರಿಸಿದ್ದಾರೆ.
ಆಗ ಮೀನು ಹಿಡಿಯಲು ಬಂದ್ದಿದ್ದ ಅವರು ಅರಣ್ಯ ಸಿಬ್ಬಂದಿಯನ್ನು ನೋಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಭರದಲ್ಲಿ ಬಳ್ಳೆ ಹಾಡಿಯ ಆದಿವಾಸಿ ಮಾಸ್ತಿ (30) ಹಿನ್ನೀರಿನ ಕೆಸರಿನಲ್ಲಿ ಸಿಲುಕಿಕೊಂಡಿದ್ದಾರೆ. ಉಳಿದವರು ಕೆಸರಿನಿಂದ ಹೊರಬರುವಲ್ಲಿ ಸಫಲರಾಗಿದ್ದು, ಕೆಸರಿನಿಂದ ಹೊರಬರಲಾಗದೆ ಮಾಸ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಹಾಗೂ ಆದಿವಾಸಿಗಳು ಆಗಮಿಸಿದ್ದರು. ಆದಿವಾಸಿ ಮಾಸ್ತಿ ಸಾವಿಗೆ ಅರಣ್ಯ ಸಿಬ್ಬಂದಿ ಕಾರಣ ಎಂದು ಸಂಬಂಧಿಕರು ಆರೋಪಿಸಿದರು. ಬಳಿಕ ಸ್ಥಳದಲ್ಲಿ ಅರಣ್ಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಸ್ಥಳಕ್ಕೆ ಎಚ್ ಡಿ ಕೋಟೆ ತಾಲೂಕಿನ ಅಂತರಸಂತೆ ಪೊಲೀಸರು ಆಗಮಿಸಿ ಆದಿವಾಸಿಗಳನ್ನು ಸಮಾಧಾನಗೊಳಿಸಿದರು. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಓದಿ: ಶಾರ್ಟ್ ಸರ್ಕ್ಯೂಟ್ ಶಂಕೆ: ಅಗ್ನಿಗಾಹುತಿಯಾದ ಮೊಬೈಲ್ ಅಂಗಡಿ
ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಬುಧವಾರ ದಿನ ನಗರದ ಹೊರವಲಯದಲ್ಲಿ ಇರುವ ಹೆಬ್ಬಾಳ ಕೈಗಾರಿಕಾ ಪ್ರದೇಶದ ಪಟಾಕಿ ದಾಸ್ತಾನು ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಇದರಿಂದ ಇಡೀ ಕಾರ್ಖಾನೆ ಬೆಂಕಿಗೆ ಆಹುತಿಯಾಗಿತ್ತು. ಈ ಬೆಂಕಿ ಸುತ್ತಮುತ್ತಲಿನ ನಾಲ್ಕು ಕಾರ್ಖಾನೆಗಳಿಗೆ ಹರಡಿದ್ದು, ಸ್ಥಳಕ್ಕೆ ಸುಮಾರು 15 ಅಗ್ನಿಶಾಮಕ ದಳ ವಾಹನಗಳು ಬಂದು ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾಗಿದ್ದವು.
ಬೆಂಕಿ ನಂದಿಸಲು ಹರಸಾಹಸಪಟ್ಟ ಅಗ್ನಿಶಾಮಕ ಸಿಬ್ಬಂದಿ: ಮೈಸೂರು ನಗರದ ಸರಸ್ವತಿಪುರಂ ಅಗ್ನಿ ಶಾಮಕ ಠಾಣೆಯ ಮೂರು ಅಗ್ನಿ ಶಾಮಕ ವಾಹನಗಳು, ಬನ್ನಿಮಂಟಪದ 3, ಹೆಬ್ಬಾಳದ 3, ಆರ್ಬಿಐನ ಎರಡು, ಹುಣಸೂರು ನಗರದ ಒಂದು, ಟಿ ನರಸೀಪುರದ ಒಂದು, ಕೆ ಆರ್ ನಗರದ ಒಂದು ಹಾಗೂ ಶ್ರೀರಂಗಪಟ್ಟಣದ ಒಂದು ಅಗ್ನಿಶಾಮಕ ವಾಹನ ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟವು. ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಓದಿ: ಗಂಡನ ಮಾತು ಕಡೆಗಣಿಸಿದ ಪತ್ನಿ.. ಪ್ರಿಯಕರನಿಗೆ ಹಣ ಕೊಟ್ಟು ಹೆಣವಾದ ಮಹಿಳೆ