ಮೈಸೂರು: ಕಾರ್ತಿಕ ಮಾಸದ ಪ್ರಯುಕ್ತ ಚಾಮುಂಡಿ ಬೆಟ್ಟದ ಮಹಾನಂದಿಗೆ 38 ರೀತಿಯ ಅಭಿಷೇಕವನ್ನು ನೆರವೇರಿಸಲಾಯಿತು. ಚಾಮುಂಡಿ ಬೆಟ್ಟದ ಚಾರಿಟಬಲ್ ಟ್ರಸ್ಟ್ ವತಿಯಿಂದ ಗ್ರಾಮಸ್ಥರ ಸಹಕಾರದೊಂದಿಗೆ 17ನೇ ವರ್ಷದ ಮಹಾಭಿಷೇಕವನ್ನು ಕೈಗೊಂಡಿದ್ದು, ಭಕ್ತಾದಿಗಳು ಉತ್ಸವದ ಕ್ಷಣಗಳನ್ನು ಕಣ್ತುಂಬಿಕೊಂಡರು.
ಬೆಳಗ್ಗೆ ಆರಂಭವಾದ ಮಹಾಭಿಷೇಕದಲ್ಲಿ ನಂದಿಗೆ ಶ್ರೀಗಂಧ, ಕುಂಕುಮ, ಅರಿಶಿನ, ಭಿಲ್ವಪತ್ರೆ, ಹಾಲು, ಮೊಸರು ಸೇರಿದಂತೆ ಸುಮಾರು 38 ವಿವಿಧ ಬಗ್ಗೆಯ ಅಭಿಷೇಕವನ್ನು ಮಾಡಲಾಯಿತು. ನಂದಿ ಮಾರ್ಗದ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ಸರಳವಾಗಿ ನಂದಿಗೆ ಮಹಾಭಿಷೇಕ ಮಾಡಲಾಯಿತು. ಆದರೂ, ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ಪೂಜೆಯನ್ನು ಕಣ್ತುಂಬಿಕೊಂಡರು.
ಇದನ್ನೂ ಓದಿ: ಗ್ರಹಣಗಳ ಅಪಾಯ ತಪ್ಪಿಸಲು ಉಡುಪಿ ಸಮುದ್ರ ತಟದಲ್ಲಿ ಅಘೋರಿಗಳಿಂದ ಅಕಾಲ ಮೃತ್ಯುಂಜಯ ಯಾಗ
ರಸ್ತೆ ದುರಸ್ತಿಯಾಗದೇ ಇದ್ದುದರಿಂದ ನಂದಿ ವಿಗ್ರಹ ರಸ್ತೆಗೆ ತೆರಳಲು ಪರದಾಡಿದ ಭಕ್ತರು ಮೆಟ್ಟಲುಗಳು ಮೂಲಕ ಆಗಮಿಸಿದರು. ಸುತ್ತೂರು ಮಠದ ಪೀಠಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಹೊಸಮಠದ ಚಿದಾನಂದ ಸ್ವಾಮೀಜಿ ಅವರ ಸಮ್ಮುಖದಲ್ಲಿ ಪೂಜಾ ವಿಧಿ ವಿಧಾನ ಜರುಗಿತು.