ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಕೋವಿಡ್ ಲಾಕ್ಡೌನ್ ನಿರ್ಬಂಧವನ್ನು ಸಡಿಲಿಕೆ ಮಾಡಿದ್ದು, ಸರ್ಕಾರವು ಜಿಲ್ಲೆಯನ್ನು ಕೆಟಗರಿ 3ರಿಂದ ಕೆಟಗಿರಿ 2ಕ್ಕೆ ಇಳಿಸಿದೆ. ಈ ಪರಿಣಾಮ ಅನ್ಲಾಕ್ 1ರಂತೆ ಕೆಟಗಿರಿ 2 ಗೆ ಅನ್ವಯಿಸಿರುವ ನೀತಿ ನಿಯಮಗಳು ಜಾರಿಗೆ ಬರಲಿವೆ ಎಂದು ಜಿಲ್ಲಾಧಿಕಾರಿ ಗೌತಮ್ ಬಗಾದಿ ಹೇಳಿದ್ದಾರೆ.
ಶೇಕಡಾ 10 ಕ್ಕಿಂತ ಜಾಸ್ತಿಯಿದ್ದ ಪಾಸಿಟಿವಿಟಿ ದರ ಇದೀಗ ಕಡಿಮೆಯಾಗಿದೆ. ಹೀಗಾಗಿ ಕೈಗಾರಿಕೆಗಳಲ್ಲಿ ಶೇಕಡಾ 50 ರಷ್ಟು, ಗಾರ್ಮೆಂಟ್ಸ್ಗಳಲ್ಲಿ ಶೇಕಡಾ 30 ಕಾರ್ಮಿಕರು ಕೆಲಸ ಮಾಡುವ ಅವಕಾಶ ನೀಡಲಾಗಿದೆ.
ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಅನುಮತಿ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳು, ಫಾಸ್ಟ್ ಫುಡ್ಗೂ ಶಾಪ್ಗಳ ಓಪನ್ಗೆ ಅವಕಾಶ ನೀಡಲಾಗಿದ್ದು ಮದ್ಯದಂಗಡಿಗಳು ಮಧ್ಯಾಹ್ನ 2 ಗಂಟೆವರೆಗೆ ತೆರೆದಿರಲಿವೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.