ETV Bharat / state

​ಲಾಕ್​ಡೌನ್​ ಸಂಕಷ್ಟ: ಮೈಸೂರಿನ ಪ್ರಖ್ಯಾತ ಸ್ಟಾರ್ ಹೋಟೆಲ್​ಗೆ ಬೀಗ - Sadan Star Hotel

​ಲಾಕ್ ಡೌನ್​ ನಿಂದ‌ ಸದನ್ ಸ್ಟಾರ್ ಹೋಟೆಲ್​ ಕಾರ್ಮಿಕರಿಗೆ ಸಂಬಳ ಹಾಗೂ ಇತರ ಸೌಲಭ್ಯ ನೀಡಲು ಕಷ್ಟವಾಗಿದೆ. ಎಲ್ಲಾ ಕಾರ್ಮಿಕರಿಗೂ ನೋಟಿಸ್ ಕೊಟ್ಟು, ನಾವು ಈ ಸದನ್ ಸ್ಟಾರ್ ಹೋಟೆಲ್​ನ್ನು ಮುಚ್ಚುತ್ತಿದ್ದೇವೆ ಎಂದು ಹೋಟೆಲ್ ಗೇಟ್ ಅನ್ನು ಲಾಕ್ ಮಾಡಲಾಗಿದೆ.

Sadan Star Hotel Band
​ಲಾಕ್ ಡೌನ್​ನಿಂದ ಸಂಕಷ್ಟ: ಸದನ್ ಸ್ಟಾರ್ ಹೋಟೆಲ್​ಗೆ ಬೀಗ
author img

By

Published : May 19, 2020, 8:18 PM IST

ಮೈಸೂರು: ಲಾಕ್ ಡೌನ್ ಪರಿಣಾಮ ಮೈಸೂರಿನ ಹೆಮ್ಮೆಯ ಸದನ್ ಸ್ಟಾರ್ ನಿರ್ವಹಣೆ ಕಷ್ಟವಾದ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ನೋಟಿಸ್ ಕೊಟ್ಟು ಮುಚ್ಚುತ್ತೇವೆ ಎಂದು ಆಡಳಿತ ಮಂಡಳಿ ಘೋಷಿಸಿದೆ.

Sadan Star Hotel Band
​ ಸದನ್ ಸ್ಟಾರ್ ಹೋಟೆಲ್​ಗೆ ಬೀಗ
ಮೈಸೂರಿನ ಪ್ರಖ್ಯಾತ ಸದನ್ ಸ್ಟಾರ್ ಹೋಟೆಲ್ ಸುಮಾರು 40 ವರ್ಷಗಳಿಂದ ದೇಶೀಯ ಹಾಗೂ ವಿದೇಶಿ ಪ್ರವಾಸಿಗರಿಗೆ ಚಿರಪರಿಚಿತ. ಸದ್ಯ ​ಲಾಕ್ ಡೌನ್​ ನಿಂದ‌ ಸದನ್ ಸ್ಟಾರ್ ಆಡಳಿತ ಮಂಡಳಿ ತನ್ನ ಕಾರ್ಮಿಕರಿಗೆ ಸಂಬಳ ಹಾಗೂ ಇತರ ಸೌಲಭ್ಯ ನೀಡಲು ಕಷ್ಟವಾಗಿದೆ. ಎಲ್ಲಾ ಕಾರ್ಮಿಕರಿಗೂ ನೋಟಿಸ್ ಕೊಟ್ಟು , ನಾವು ಈ ಸದನ್ ಸ್ಟಾರ್ ಹೋಟೆಲ್​ನ್ನು ಮುಚ್ಚುತ್ತಿದ್ದೇವೆ ಎಂದು ಹೇಳಿ ಹೋಟೆಲ್ ಗೇಟ್ ಅನ್ನು ಲಾಕ್ ಮಾಡಿದೆ.

ಮೈಸೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನಾರಾಯಣ್ ಗೌಡ ಈ ವಿಚಾರವನ್ನು ಖಚಿತ ಪಡಿಸಿದ್ದು, ನಿರ್ವಹಣೆ ಕಷ್ಟ ಆದ ಕಾರಣ ಈ ನಿರ್ಧಾರ ಮಾಡಿದ್ದಾರೆ. ಲಾಕ್​ಡೌನ್​ನಿಂದ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದ್ದು, ಚೇತರಿಸಿಕೊಳ್ಳಲು 2 ವರ್ಷ ಬೇಕು. ದಯವಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಾಯಕ್ಕೆ ಬರಬೇಕೆಂದು ಮನವಿ ಮಾಡಿದ್ದಾರೆ.

ದೇಶದ ಕಸ ಮುಕ್ತ ನಗರಗಳಲ್ಲಿ ಮೈಸೂರಿಗೆ 5 ಸ್ಟಾರ್ ಪಟ್ಟ :

ದೇಶದ ಕಸ ಮುಕ್ತ 5 ಸ್ಟಾರ್ ನಗರಗಳ ಪಟ್ಟಿಯಲ್ಲಿ ಮೈಸೂರು ಸಹ ಸ್ಥಾನ ಪಡೆದಿದೆ. ಇಂದು ಬಿಡುಗಡೆಯಾದ ಪಟ್ಟಿಯಲ್ಲಿ ದೇಶದ 6 ನಗರಗಳು 5 ಸ್ಟಾರ್ ಪಟ್ಟ ಪಡೆದಿವೆ.

5 ಸ್ಟಾರ್ ಕಸ ಮುಕ್ತ ನಗರಗಳ ಪಟ್ಟಿ:

1. ಅಂಬಿಕಾಪುರ್ (ಛತ್ತೀಸ್​ಗಡ)
2. ರಾಜ್ ಕೋಟ್ ( ಗುಜರಾತ್)
3. ಮೈಸೂರು ( ಕರ್ನಾಟಕ)
4. ಸೂರತ್ (ಗುಜರಾತ್)
5. ಇಂದೋರ್ ( ಮಧ್ಯ ಪ್ರದೇಶ)
6. ನವಿ ಮುಂಬೈ (ಮಹಾರಾಷ್ಟ್ರ)

ಉಸ್ತುವಾರಿ ಸಚಿವರ ಅಭಿನಂದನೆ:

ದೇಶದ ತ್ಯಾಜ್ಯ ಮುಕ್ತ ನಗರ ಎಂಬ ಪಟ್ಟಿಯಲ್ಲಿ 5 ಸ್ಟಾರ್ ಪಟ್ಟ ಪಡೆಯಲು ಕಾರಣರಾದ ಎಲ್ಲರಿಗೂ ಅಭಿನಂದನೆಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.