ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಸ್ಥಳೀಯ ಜೆಡಿಎಸ್ ಮುಖಂಡರು ಶಾಸಕ ಜಿ ಟಿ ದೇವೇಗೌಡ ವಿರುದ್ಧ ಸ್ವಾಭಿಮಾನಿ ಕಾರ್ಯಕರ್ತರ ಸಭೆ ನಡೆಸಿ ಜೆಡಿಎಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ, ಶಾಸಕ ಹಾಗೂ ಅವರ ಮಗನನ್ನ ಮುಂದಿನ ಚುನಾವಣೆಯಲ್ಲಿ ಸೋಲಿಸುವ ಘೋಷಣೆ ಕೂಡಾ ಮಾಡಿದ್ದಾರೆ.
ಇಂದು ನಗರದ ಹೊರವಲಯದ ಸಮುದಾಯ ಭವನದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಸ್ಥಳೀಯ ಪ್ರಭಾವಿ ಮುಖಂಡರು ಸ್ವಾಭಿಮಾನಿ ಕಾರ್ಯಕರ್ತರ ಸಭೆ ನಡೆಸಿ ಕಳೆದ ಮೂರು ವರ್ಷಗಳಿಂದ ಜೆಡಿಎಸ್ ಶಾಸಕರಾಗಿದ್ದ ಜಿ ಟಿ ದೇವೇಗೌಡ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಜೆಡಿಎಸ್ ಪಕ್ಷ ಬಿಡುತ್ತೇನೆಂದು ಹೇಳಿಕೆ ನೀಡುತ್ತಾ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರು.
ಆದರೆ ಈಗ ಪುನಃ ಜೆಡಿಎಸ್ ನಲ್ಲೇ ಉಳಿದುಕೊಂಡಿದ್ದು, ಇದರ ವಿರುದ್ಧ ಚಾಮುಂಡೇಶ್ವರಿ ಕ್ಷೆತ್ರದ ಸ್ಥಳೀಯ ಮುಖಂಡರಾದ ಪಂಚ ಪಾಂಡವರು ಖ್ಯಾತಿಯ ಮಾವಿನಹಳ್ಳಿ ಸಿದ್ದೇಗೌಡ, ಬಿರಿಹುಂಡಿ ಬಸವಣ್ಣ, ಬೆಳವಾಡಿ ಶಿವಮೂರ್ತಿ, ಮಾದೇಗೌಡ ಹಾಗೂ ಕೆಂಪ ನಾಯಕ ಸ್ವಾಭಿಮಾನಿ ಕಾರ್ಯಕರ್ತರ ಸಭೆ ನಡೆಸಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಜಿ ಟಿ ದೇವೇಗೌಡ ಹಾಗೂ ಅವರ ಮಗನನ್ನ ಸೋಲಿಸುವ ಪಣ ತೊಟ್ಟು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಕಾರ್ಯಕರ್ತರ ಸಭೆಯಲ್ಲೇ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:ಮೈಸೂರು ಜಿಲ್ಲೆಗೆ ಬಂದಿರುವ ಹೊಸ ಇವಿಎಂಗಳ ಬಗ್ಗೆ ಅನುಮಾನ: ಕೆಪಿಸಿಸಿ ವಕ್ತಾರ ಎಮ್ ಲಕ್ಷ್ಮಣ್