ETV Bharat / state

ದಸರಾದಲ್ಲೂ ವಿಜೃಂಭಿಸದ ಅರಮನೆ ನಗರಿ: ಪ್ರವಾಸಿಗರಿಲ್ಲದೆ ಸೊರಗಿತು ಜಂಬೂಸವಾರಿ

author img

By

Published : Oct 29, 2020, 4:18 PM IST

ಮೈಸೂರು ದಸರಾ ಉತ್ಸವಕ್ಕೆ ದೇಶ-ವಿದೇಶದಿಂದ ಪ್ರವಾಸಿಗರು ಆಗಮಿಸುವುದರಿಂದ ಹಿಡಿದು, ದೇಶದ ನಾನಾ ಭಾಗದಿಂದ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿಯ ಸರಳ ದಸರಾದಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಆದಾಯಕ್ಕೂ ಕತ್ತರಿ ಬಿದ್ದಿದೆ.

Mysore Palace
ಮೈಸೂರು ಅರಮನೆ

ಮೈಸೂರು: ನವರಾತ್ರಿಯ ಉತ್ಸವ ಆರಂಭವಾಯಿತೆಂದರೆ ಮೈಸೂರಿಗೆ ದೇಶ-ವಿದೇಶ, ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದಲೂ ಸಹ ಪ್ರವಾಸಿಗರು ಬರುತ್ತಾರೆ. ನವರಾತ್ರಿಯ ಸಂದರ್ಭದಲ್ಲಿ ಅರಮನೆಗೆ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಆದರೆ ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರವಾಸಿಗರು ಬಾರದೆ ಆದಾಯ ಗಣನೀಯವಾಗಿ ಇಳಿಮುಖವಾಗಿದೆ.

ಈ ವರ್ಷದ ದಸರಾ ನವರಾತ್ರಿಯ 10 ದಿನದ ಸಂದರ್ಭದಲ್ಲಿ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ದಸರಾದ ಆಕರ್ಷಣೆಯಾದ ಅಂಬಾವಿಲಾಸ ಅರಮನೆಗೆ ವಾರಾಂತ್ಯಕ್ಕೆ 10 ರಿಂದ 20 ಸಾವಿರ ವರೆಗೂ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ನವರಾತ್ರಿ ಉತ್ಸವದಿಂದ ವಿಜಯದಶಮಿವರೆಗೂ ಕೇವಲ 9,516 ಮಂದಿಯಷ್ಟೇ ಭೇಟಿ ನೀಡಿದ್ದಾರೆ. ಜಂಬೂಸವಾರಿ ವೀಕ್ಷಣೆಗೆ ಕೆಲವೇ ಮಂದಿಗೆ ಅವಕಾಶ ನೀಡಲಾಗಿತ್ತಾದರೂ, ಜಂಬುಸವಾರಿಯ ಬಳಿಕವೂ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿರಲಿಲ್ಲ.

ಇದರಲ್ಲಿ 386 ಮಕ್ಕಳು, 13 ಮಂದಿ ವಿದೇಶಿಗರು, 9,117 ಮಂದಿ ದೇಶಿಯ ಪ್ರವಾಸಿಗರಿದ್ದಾರೆ. ಹತ್ತು ದಿನದಲ್ಲಿ ಕೇವಲ 6.50 ಲಕ್ಷ ರೂಪಾಯಿ ಮಾತ್ರ ಸಂಗ್ರಹವಾಗಿದೆ. ಪ್ರತಿ ವರ್ಷ ಜಂಬೂಸವಾರಿ ಮುಗಿದರೂ ಮರುದಿನ ರಜಾದಿನಗಳು ಇರುತ್ತಿದ್ದರಿಂದ ಮೈಸೂರಿನಲ್ಲಿ ಪ್ರವಾಸಿಗರ ಹರಿವು ಹೆಚ್ಚಾಗಿರುತ್ತಿತ್ತು, ಕೆ.ಆರ್.ವೃತ್ತ , ಮೃಗಾಲಯ, ಚಾಮುಂಡಿ ಬೆಟ್ಟದ ಹಾದಿಯಲ್ಲಿ ವಾಹನಗಳ ದಟ್ಟಣೆ ಇರುತ್ತಿತ್ತು.

ಜೊತೆಗೆ ಕೆ.ಆರ್.ಎಸ್, ನಂಜನಗೂಡಿನ ನಂಜುಡೇಶ್ವರ ದೇವಾಲಯ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳಿಗೂ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ಪ್ರಮುಖ ಆಕರ್ಷಣೀಯ ಕೇಂದ್ರಗಳಿಗೂ ಭೇಟಿ ನೀಡದಿರುವುದು ಕೋವಿಡ್ ಆತಂಕ ಇನ್ನು ಕಡಿಮೆಯಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.