ಮೈಸೂರು: ಮುಡಾದಲ್ಲಿ ವ್ಯಾಪಕ ಭ್ರಷ್ಟಾಚಾರ ಎಸಗಿರುವ ಮುಡಾ ಆಯುಕ್ತ ಡಿ.ಬಿ.ನಟೇಶ್ ಅವರನ್ನು, ಶಾಸಕರು ಹಕ್ಕುಚ್ಯುತಿ ಮೂಲಕ ಅಮಾನತು ಮಾಡಲು ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ಹೇಳಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಡಾ ಆಯುಕ್ತ ನಟೇಶ್ ಅವರ ನಿರ್ಲಕ್ಷ್ಯದಿಂದ ಬಜೆಟ್, ನಗರಾಭಿವೃದ್ಧಿ ಇಲಾಖೆ ತಿರಸ್ಕಾರ ಮಾಡಿದೆ. ರೈತರಿಗೆ 1298 ಕೋಟಿ ರೂ.ಭೂಮಿ ಪರಿಹಾರ ಕೊಡಬೇಕು. ಆದರೆ, 674 ಕೋಟಿ ರೂ.ಬಜೆಟ್ ಮಂಡನೆ ಮಾಡಲು ಮುಂದಾಗಿ, ಅಸಮತೋಲನ ಕಂಡು ಬಂದಿದೆ ಎಂದರು.
ಮುಡಾ ತನ್ನ ವ್ಯಾಪ್ತಿ ಮೀರಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದೆ. ಮುಡಾ ಆಯುಕ್ತರ ವಿರುದ್ಧ ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದೆ, ಆದರೆ, ಪ್ರಾದೇಶಿಕ ಆಯುಕ್ತರು ನೋಟಿಸ್ ಅನ್ನು ಕೂಡ ಮುಡಾ ಆಯುಕ್ತರಿಗೆ ನೀಡಿಲ್ಲ. ಜುಲೈ 5ರಿಂದ ಭ್ರಷ್ಟರಿಂದ ಮುಡಾ ಉಳಿಸಿ ಅಭಿಯಾನ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:Central cabinet expansion: ಈ 27 ಮುಖಗಳಲ್ಲಿ ಯಾರಿಗೆ ಮಣೆ ಹಾಕ್ತಾರೆ ನಮೋ!?