ETV Bharat / state

ಡೆತ್​ನೋಟ್ ಬರೆದಿಟ್ಟು ಕರಾಮುವಿ ಸಹಾಯಕ ಕುಲಸಚಿವರು ಆತ್ಮಹತ್ಯೆ - mysore Open University Assistant Registrar committed suicide

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

karnataka-state-open-university-assistant-registrar-committed-suicide
ಡೆತ್​ನೋಟ್ ಬರೆದಿಟ್ಟು ಕರಾಮುವಿ ಸಹಾಯಕ ಕುಲಸಚಿವ ಆತ್ಮಹತ್ಯೆ
author img

By

Published : Jun 10, 2021, 12:21 AM IST

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರಿನ ಚಾಮುಂಡಿಪುರಂ ನಿವಾಸಿ ಮಂಜುಪ್ರಸಾದ್ (55) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದವರು.

ಬುಧವಾರ ಮಧ್ಯಾಹ್ನ 12ರ ಸಮಯದಲ್ಲಿ ಹೆಂಡತಿ ಮಕ್ಕಳು ಇಲ್ಲದ ವೇಳೆ ಮನೆಯಲ್ಲಿ ಡೆತ್​​ನೋಟ್ ಬರೆದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

karnataka-state-open-university-assistant-registrar-committed-suicide
ಮಂಜುಪ್ರಸಾದ್

ಡೆತ್​​ನೋಟ್​​​ನಲ್ಲಿ ಏನಿದೆ:

ರಿಯಾಜ್ ಮತ್ತು ಜಾವಿದ್ ಎಂಬುವರಿಂದ ನಾನು ಜಯಲಕ್ಷ್ಮೀಪುರಂನಲ್ಲಿ ನಿವೇಶನ ಖರೀದಿಸಿದ್ದೆ. ಬಳಿಕ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿದಾಗ, ಅವರಿಬ್ಬರು ನನಗೆ ನೀಡಿರುವ ದಾಖಲೆಗಳು ಸುಳ್ಳು ಎಂದು ತಿಳಿದು ಬಂದಿದೆ. ಅಲ್ಲದೇ, ಈ ಸಂಬಂಧ ದೂರು ಕೂಡ ದಾಖಲಾಗಿದೆ ಎಂದು ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ನಗರದ ಕೆ.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಫ್ಲ್ಯಾಟ್ ವಿಚಾರಕ್ಕಾಗಿ ಶಾಸಕ ಜಮೀರ್ - ನಿಖಿಲ್ ಬೆಂಬಲಿಗರ ನಡುವೆ ಗಲಾಟೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.