ETV Bharat / state

ನಮ್ಮ ಕುಟುಂಬದಿಂದ ಎಂಎಲ್ಸಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಜಿ.ಟಿ.ದೇವೇಗೌಡ ಸ್ಪಷ್ಟನೆ

author img

By

Published : Nov 13, 2021, 4:40 PM IST

ಯಾವ ಕಾರಣಕ್ಕೂ ವಿಧಾನ ಪರಿಷತ್‌ಗೆ ನಮ್ಮ ಕುಟುಂಬದವರು ಅಭ್ಯರ್ಥಿ ಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಜಿಟಿಡಿ, ಚಾಮುಂಡೇಶ್ವರಿ ಕ್ಷೇತ್ರದ ಚಾರ್ಜ್​ ಅನ್ನು ಸಾ.ರಾ.ಮಹೇಶ್ ತೆಗೆದುಕೊಂಡಿದ್ದಾರೆ‌ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು..

ಜಿ.ಟಿ.ದೇವೇಗೌಡ ಸ್ಪಷ್ಟನೆ
ಜಿ.ಟಿ.ದೇವೇಗೌಡ ಸ್ಪಷ್ಟನೆ

ಮೈಸೂರು : ನಮ್ಮ ಕುಟುಂಬದವರು ಎಂಎಲ್ಸಿ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್​​ ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಜೆಡಿಎಸ್​​ನ ಶಾಸಕ ಸಾ.ರಾ.ಮಹೇಶ್ ನೀಡಿದ್ದ ಆಫರ್​ ಅ​ನ್ನು ಶಾಸಕ ಜಿ.ಟಿ.ದೇವೇಗೌಡ ತಿರಸ್ಕರಿಸಿದ್ದಾರೆ.

ಪರಿಷತ್‌ ಚುನಾವಣೆ ಕುರಿತಂತೆ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರು ಸ್ಪಷ್ಟನೆ ನೀಡಿರುವುದು..

ಇಂದು ಚಾಮುಂಡಿ ಬೆಟ್ಟದ ನಂದಿ ಮಾರ್ಗದಲ್ಲಿ ರಸ್ತೆ ಕುಸಿತ ಸ್ಥಳಕ್ಕೆ ಸಚಿವ ಸಿ ಸಿ ಪಾಟೀಲ್ ಜೊತೆ ಆಗಮಿಸಿ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟದ ಸುರಕ್ಷತೆಗೆ ಏನೇನು ಕ್ರಮಕೈಗೊಳ್ಳಬೇಕು ಎಂಬ ಬಗ್ಗೆ ಉಸ್ತುವಾರಿ ಸಚಿವರು, ಲೋಕೋಪಯೋಗಿ ಸಚಿವರು ಹಾಗೂ ಮುಖ್ಯಮಂತ್ರಿಗಳ‌ ಜೊತೆ ಸಭೆ ನಡೆಸಿ, ಚಾಮುಂಡಿ ಬೆಟ್ಟದ ಸಂರಕ್ಷಣೆಗೆ ಏನು ಮಾಡಬೇಕೆಂದು ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಪರಿಷತ್ ಚುನಾವಣೆ ಎದುರಿಸುತ್ತೇವೆ. ‌ಅವರ ಮನೆಯವರೇ ಪಕ್ಷದ ಅಭ್ಯರ್ಥಿಯಾಗುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜಿ.ಟಿ.ಡಿ, ಯಾವ ಕಾರಣಕ್ಕೂ ವಿಧಾನ ಪರಿಷತ್‌ಗೆ ನಮ್ಮ ಕುಟುಂಬದವರು ಅಭ್ಯರ್ಥಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಚಾರ್ಜ್ ಅ​ನ್ನು ಸಾ.ರಾ.ಮಹೇಶ್ ತೆಗೆದುಕೊಂಡಿದ್ದಾರೆ‌.

ನನ್ನನ್ನು ಬಿಟ್ಟು ನಮ್ಮ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರನ್ನು ಆಯ್ಕೆ ಮಾಡಿ ಪತ್ರ ಕೊಡಿಸಿದ್ದಾರೆ. ನನ್ನನ್ನು ಬಿಟ್ಟು ಹುಣಸೂರು ಉಪ ಚುನಾವಣೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದ ಬೆಳವಾಡಿಗೆ ಬಂದು ದೇವಸ್ಥಾನ ಉದ್ಘಾಟಿಸಿದ್ದಾರೆ.

ರಮ್ಮನಹಳ್ಳಿಯಲ್ಲಿ ರೋಡ್ ಶೋ ಮಾಡಿದ್ದಾರೆ. ‌ಸ್ಥಳೀಯ ಶಾಸಕ ನನ್ನನ್ನು ಕರೆದಿಲ್ಲ. ಅವರನ್ನು ಬಿಟ್ಟು ಎರಡು ವರ್ಷ ಆಗಿದೆ. ಸಿದ್ದರಾಮಯ್ಯ ಹಾಗೂ ಬಿಜೆಪಿಯವರ ಜೊತೆ ಸೌಹರ್ದಯುತವಾಗಿ ಇದ್ದೇನೆ. ಮುಂದಿನ ನಡೆಯ ಬಗ್ಗೆ ಇನ್ನೂ ಏನು ತೀರ್ಮಾನ ಮಾಡಿಲ್ಲ ಎಂದರು.

ರಾಜಕೀಯ ಮಾತನಾಡುವಾಗ ಮಾತನಾಡುತ್ತೇನೆ. ನಾನು ಹೆಚ್. ಡಿ. ದೇವೇಗೌಡರ ಸಂಪರ್ಕದಲ್ಲಿಲ್ಲ. ಯಾವ ಕಾರಣಕ್ಕೂ ವಿಧಾನ ಪರಿಷತ್ ಚುನಾವಣೆಗೆ ನಮ್ಮ ಕುಟುಂಬದ ಸದಸ್ಯರು ಸ್ಪರ್ಧೆ ಮಾಡುವುದಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.