ETV Bharat / state

ದಸರಾ ಆನೆಗಳಿಗೆ ಮರಳು ಮೂಟೆ ತಾಲೀಮು: ಇಲ್ಲಿದೆ ಇಂಟ್ರಸ್ಟಿಂಗ್​ ವಿಷ್ಯಾ! - ದಸರಾ ಜಂಬೂ ಸವಾರಿ

ಮೈಸೂರು ದಸರಾ ಜಂಬು ಸವಾರಿಗೆ ಸರ್ವ ಸಿದ್ಧತೆಗಳನ್ನು ಮಾಡಲಾಗುತ್ತಿದ್ದು, ಜನಾಕರ್ಷಣೆಯ ಜಂಬು ಸವಾರಿಗೆ ಅರ್ಜುನನ ತಂಡಕ್ಕೆ ಇಂದಿನಿಂದ ತಾಲೀಮು ನೀಡಲಾಗುತ್ತಿದೆ.

ಸರಾ ಜಂಬು ಸವಾರಿಗೆ ಸರ್ವ ಸಿದ್ಧತೆ
author img

By

Published : Sep 7, 2019, 6:50 AM IST

ಮೈಸೂರು: ದಸರಾ ಜಂಬೂ ಸವಾರಿಯ ದಿನ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುವ ಅರ್ಜುನನಿಗೆ ಶುಕ್ರವಾರದಿಂದ 350 ಕೆಜಿ ತೂಕದ ಮರಳು ಮೂಟೆಯನ್ನು ಹೊರಿಸಿ ಮರಳಿನ ತಾಲೀಮು ಆರಂಭಿಸಲಾಗಿದೆ.

ಆನೆಗಳ ವೈದ್ಯ ನಾಗರಾಜ್

ಹೀಗೆ ಹಂತ ಹಂತವಾಗಿ ಮರಳಿನ ತಾಲೀಮು ಮಾಡಿಸುತ್ತ ಭಾರ ಹೆಚ್ಚಿಸಲಾಗುತ್ತದೆ.

ನಂತರ 750 ಕೆಜಿ ತೂಕದ ಮರದ ಅಂಬಾರಿಯ ತಾಲೀಮಿನ ಮೇಲೆ ತರಬೇತಿ ನೀಡಲಾಗುತ್ತದೆ. ಈ ತಾಲೀಮನ್ನು ದಸರಾದಲ್ಲಿ ಭಾಗವಹಿಸುವ ಅರ್ಜುನ, ಅಭಿಮನ್ಯು, ಧನಂಜಯ ಹಾಗೂ ಈಶ್ವರ ಆನೆಗಳಿಗೆ ಮಾಡಿಸಲಾಗುತ್ತದೆ ಎಂದು ಆನೆ ವೈದ್ಯ ನಾಗರಾಜ್ ಹೇಳಿದರು.

ತಾಲೀಮು ಹೇಗಿರುತ್ತೆ: ಅರಮನೆಯ ಒಳಗೆ ಕೋಟೆ ಸೋಮೇಶ್ವರ ದೇವಾಲಯದ ಆವರಣದಲ್ಲಿ ಬಿಡಾರ ಹೂಡಿರುವ ದಸರಾ ಗಜಪಡೆಯ, ಮೊದಲ‌ ತಂಡದ ಕ್ಯಾಪ್ಟನ್ ಅರ್ಜುನ ನೇತೃತ್ವದ ಆನೆಗಳನ್ನು ನಿತ್ಯ ಬೆಳಗ್ಗೆ 8 ಗಂಟೆಗೆ ಅರಮನೆಯಿಂದ ಬನ್ನಿಮಂಟಪದವರೆಗೆ ಇರುವ ಸುಮಾರು 5 ಕಿಲೋಮೀಟರ್ ದೂರವನ್ನು 2 ಗಂಟೆ ಸಮಯದಲ್ಲಿ ಕ್ರಮಿಸಿ ವಾಪಸ್ ಬರುತ್ತದೆ.

ಗಜಪಡೆ ಅರಮನೆ ಕೋಟೆ ಆಂಜನೇಯ ದ್ವಾರದ ಬಳಿ ಬಂದ ನಂತರ ಆಂಜನೇಯನಿಗೆ ಸೊಂಡಿಲನ್ನು ಎತ್ತಿ ನಮಸ್ಕರಿಸುವ ಅರ್ಜುನ, ನಂತರ ಕೆ.ಆರ್ ವೃತ್ತದ ಬಳಿ ಬಂದ ಸಂದರ್ಭದಲ್ಲಿ ನಿಂತು ಮಾವುತನಿಗೆ ಸೊಂಡಿಲಿನ ಮೂಲಕ ಕಬ್ಬು ನೀಡುವಂತೆ ಕೇಳುತ್ತಾನೆ.

ನಂತರ ಕಬ್ಬು ತಿಂದು ಸಾಗುವ ಅರ್ಜುನ ಕೆ.ಆರ್.ಮಾರ್ಕೆಟ್ ಬಳಿ ಜನರು ಹೂ ನೀಡುತ್ತಾರೆ.‌ ಹೂ ಹಾಕಿಕೊಂಡು ರಾಜ ಗಾಂಭಿರ್ಯದಿಂದ ಜನರು ಹಾಗೂ ವಾಹನಗಳ ಮಧ್ಯೆ ಭಾರ ಹೊತ್ತು ಹೆಜ್ಜೆ ಹಾಕುವ ಗಜಪಡೆಯನ್ನು ನೋಡಲು ಜನರು ಸಾಲುಗಟ್ಟಿ ರಸ್ತೆಯ ಎರಡೂ ಭಾಗಗಳಲ್ಲೂ ನಿಂತಿರುತ್ತಾರೆ.

Intro:ಮೈಸೂರು:ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳಿಗೆ ಭಾರ ಹೊರುವ ತಾಲೀಮನ್ನು ಏಕೆ ನಡೆಸುತ್ತಾರೆ ಎಂಬ ಕುತೂಹಲವೇ ಈ ಸ್ಟೋರಿ ನೋಡಿ.

Body:

ಮೈಸೂರು ದಸರಾ ಜಂಬೂಸವಾರಿಯ ದಿನ ೭೫೦ ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುವ ಅರ್ಜುನ ಆನೆಗೆ ಶುಕ್ರವಾರದಿಂದ ೩೫೦ ಕೆಜಿ ತೂಕದ ಮರಳು ಮೂಟೆಯನ್ನು ತೊಟ್ಟಿಲಿನ ಮೇಲೆ ಇಟ್ಟು ತಾಲೀಮು ನಡೆಸಲಾಗುತ್ತದೆ.
ನಂತರ ದಸರ ಸಮೀಪಿಸುತ್ತಿದ್ದಂತೆ ೭೫೦ ಕೆಜಿ ತೂಕದ ಮರದ ಅಂಬಾರಿಯ ತಾಲೀಮನ್ನು ಮಾಡಲಾಗುತ್ತದೆ.
ಈ ತಾಲೀಮನ್ನು ದಸರದಲ್ಲಿ ಭಾಗವಹಿಸುವ ಅರ್ಜುನ, ಅಭಿಮನ್ಯು, ಧನಂಜಯ ಹಾಗೂ ಈಶ್ವರ ಆನೆಗಳಿಗೆ ನಡೆಸಲಾಗುತ್ತದೆ.
ಏಕೆಂದರೆ ದಸರ ಸಂದರ್ಭದಲ್ಲಿ ಜಂಬೂಸವಾರಿಯ ದಿನ ಅರ್ಜುನ ಆನೆಗೆ ಏನಾದರೂ ತೊಂದರೆ ಆದರೆ ಬೇರೆ ಆನೆಗಳನ್ನು ಬದಲಿ ಆನೆಯಾಗಿ ಇಟ್ಟುಕೊಳ್ಳುವ ಉದ್ದೇಶದಿಂದ ಈ ತಾಲೀಮನ್ನು ನಡೆಸಲಾಗುತ್ತದೆ.
ಜೊತೆಗೆ ಜಂಬೂಸವಾರಿಯ ದಿನ ಚಿನ್ನದ ಅಂಬಾರಿ ಹೊರುವ ಹಾಗೂ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಇತರ ೬ ಆನೆಗಳು ಅಂದು ಜನ ಹಾಗೂ ಶಬ್ದಕ್ಕೆ ಹೆದರದೆ ಇರಲಿ, ಜೊತೆ ಭಾರ ಹೊರುವುದನ್ನು ಅಭ್ಯಾಸ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಮೊದಲು ೩೫೦ ಕೆಜಿ‌ ತೂಕದ ಮರಳಿನ ಮೂಟೆ, ನಂತರ ೭೫೦ ಕೆಜಿ ತೂಕದ ಮರದ ಅಂಬಾರಿ ಹೊರುವುದನ್ನು ಅಭ್ಯಾಸ ಮಾಡಿಕೊಂಡ ನಂತರ ಚಿನ್ನದ ಅಂಬಾರಿಯನ್ನು ಸರಾಗವಾಗಿ ಹೊತ್ತುಕೊಂಡು ಹೋಗಲಿ ಎಂಬ ಉದ್ದೇಶದಿಂದ ಈ ರೀತಿಯ ತಾಲೀಮನ್ನು ನಡೆಸಲಾಗುತ್ತದೆ ಎನ್ನುತ್ತಾರೆ ಆನೆ ವೈದ್ಯ ನಾಗರಾಜ್ .

ತಾಲೀಮು ಹೇಗಿರುತ್ತದೆ: ಅರಮನೆಯ ಒಳಗೆ ಕೋಟೆ ಸೋಮೇಶ್ವರ ದೇವಾಲಯದ ಆವರಣದಲ್ಲಿ ಬಿಡಾರ ಹೂಡಿರುವ ದಸರ ಗಜಪಡೆಯ ಮೊದಲ‌ ತಂಡದ ಕ್ಯಾಪ್ಟನ್ ಅರ್ಜುನ ನೇತೃತ್ವದ ಆನೆಗಳನ್ನು ಪ್ರತಿದಿನ ಬೆಳಿಗ್ಗೆ ೮ ಗಂಟೆಗೆ ಅರಮನೆಯಿಂದ ಬನ್ನಿಮಂಟಪದ ವರೆಗೆ ಇರುವ ಸುಮಾರು ೫ ಕಿಲೋಮೀಟರ್ ದೂರವನ್ನು ಸುಮಾರು ೨ ಗಂಟೆ ಸಮಯದಲ್ಲಿ ಕ್ರಮಿಸಿ ವಾಪಸ್ ಬರುತ್ತದೆ.
ಗಜಪಡೆಯು ಅರಮನೆಯ ಕೋಟೆ ಆಂಜನೇಯ ದ್ವಾರದ ಬಳಿ ಬಂದ ನಂತರ ಆಂಜನೇಯನಿಗೆ ಸೊಂಡಿಲನ್ನು ಎತ್ತಿ ನಮಸ್ಕರಿಸುವ ಅರ್ಜುನನು ನಂತರ ಕೆ.ಆರ್ ವೃತ್ತದ ಬಳಿ ಬಂದ ಸಂದರ್ಭದಲ್ಲಿ ನಿಂತು ಮಾವುತನಿಗೆ ಸೊಂಡಿಲಿನ ಮೂಲಕ ಕಬ್ಬು ನೀಡುವಂತೆ ಕೇಳುತ್ತಾನೆ.
ನಂತರ ಕಬ್ಬು ತಿಂದು ಸಾಗುವ ಅರ್ಜುನ ಆನೆಗೆ ಕೆ.ಆರ್.ಮಾರ್ಕೆಟ್ ಬಳಿ ಜನರು ಹೂ ನೀಡುತ್ತಾರೆ.‌ ಹೂ ಹಾಕಿಕೊಂಡು ರಾಜ ಗಾಂಭಿರ್ಯದಿಂದ ಜನರು ಹಾಗೂ ವಾಹನಗಳ ಮಧ್ಯೆ ಭಾರ ಹೊತ್ತು ಹೆಜ್ಜೆ ಹಾಕುವ ಗಜಪಡೆಯನ್ನು ನೋಡಲು ಜನರು ಸಾಲುಗಟ್ಟಿ ರಸ್ತೆಯ ಎರಡು ಭಾಗಗಳಲ್ಲೂ ನಿಂತಿರುತ್ತಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.