ETV Bharat / state

ಹುಣಸೂರು ಉಪ ಕದನ: ಮೂರು ಪಕ್ಷಗಳ ಅಭ್ಯರ್ಥಿಗಳು ಫೈನಲ್​​​​ - Hunsur by-election news

ಸುಪ್ರೀಂ ಕೋರ್ಟಿನ ತೀರ್ಪಿನ ಬಳಿಕ ಹುಣಸೂರು ಉಪ ಚುನಾವಣೆಗೆ ಮೂರು ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ನಾಮಪತ್ರ ಸಲ್ಲಿಸಿದ್ದು, ಉಪ ಚುನಾವಣಾ ಕಣ ರಂಗೇರಿದೆ.

ಹುಣಸೂರು ಉಪ ಚುನಾವಣೆ: ಮೂರು ಪಕ್ಷದ ಅಭ್ಯರ್ಥಿಗಳು ಫೈನಲ್
author img

By

Published : Nov 14, 2019, 5:33 PM IST

ಮೈಸೂರು: ಸುಪ್ರೀಂ ಕೋರ್ಟಿನ ತೀರ್ಪಿನ ಬಳಿಕ ಹುಣಸೂರು ಉಪ ಚುನಾವಣೆಗೆ ಮೂರು ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ನಾಮಪತ್ರ ಸಲ್ಲಿಸಿದ್ದು, ಉಪ ಚುನಾವಣಾ ಕಣ ರಂಗೇರಿದೆ.

ಒಟ್ಟು 2,26,920 ಮತದಾರರಿರುವ ಕ್ಷೇತ್ರದಲ್ಲಿ 20 ವರ್ಷಗಳ ನಂತರ ಉಪ ಚುನಾವಣೆ ನಡೆಯುತ್ತಿದ್ದು, ಕಳೆದ ಬಾರಿ ಜೆಡಿಎಸ್​​ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಹೆಚ್.ವಿಶ್ವನಾಥ್ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಈಗ ಉಪ ಚುನಾವಣೆ ನಡೆಯುತ್ತಿದೆ. ಈಗಾಗಲೇ ಉಪ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ನಾಮಪತ್ರ ಸಲ್ಲಿಸಿದ್ದು, ಜೆಡಿಎಸ್​​ನಿಂದ ಮೊದಲ ಬಾರಿಗೆ ಜಿ.ಟಿ.ದೇವೆಗೌಡ ಕುಟುಂಬದ ಹೊರತಾಗಿ ಹೊಸ ಮುಖ ಸೋಮಶೇಖರ್ ಜೆಡಿಎಸ್​​ನಿಂದ ಟಿಕೆಟ್ ಪಡೆದಿದ್ದಾರೆ. ಬಿಜೆಪಿಯಿಂದ ಹೆಚ್.ವಿಶ್ವನಾಥ್ ಟಿಕೆಟ್ ಪಡೆದಿದ್ದು, ಈಗ ಉಪ ಚುನಾವಣೆ ಕಣ ರಂಗಾಗಿದೆ. ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಜಿ.ಟಿ.ಡಿ. ಕುಟುಂಬಕ್ಕೆ ಕೈ ತಪ್ಪಿದ ಜೆಡಿಎಸ್ ಟಿಕೆಟ್: ಒಕ್ಕಲಿಗರ ಪ್ರಾಬಲ್ಯವಿರುವ ಹುಣಸೂರು ಕ್ಷೇತ್ರದಲ್ಲಿ ಜಿ.ಟಿ.ಡಿ. ಕುಟುಂಬ ಬಿಗಿ ಹಿಡಿತ ಸಾಧಿಸಿದ್ದು, ಜಿ.ಟಿ.ದೇವೆಗೌಡರ ಪುತ್ರ ಹರೀಶ್ ಗೌಡ ಭಾವಿ ಅಭ್ಯರ್ಥಿ ಎಂದೇ ಬಿಂಬಿತವಾಗಿ ಹುಣಸೂರಿನ ಪ್ರತಿಯೊಂದು ಗ್ರಾಮದಲ್ಲೂ ಕೆಲಸ ಮಾಡಿದ್ದರು‌. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜಿ.ಟಿ.ದೇವೆಗೌಡರು ಉಪ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗದೆ ತಟಸ್ಥವಾಗಿ ಇರುತ್ತೇನೆ ಎಂದು ಘೋಷಿಸಿದ್ದಾರೆ.

Intro:ಮೈಸೂರು: ಸುಪ್ರೀಂ ಕೋರ್ಟಿನ ತೀರ್ಪಿನ ಬಳಿಕ ಹುಣಸೂರು ಉಪ ಚುನಾವಣೆಗೆ ಮೂರು ಅಭ್ಯರ್ಥಿಗಳು ಫೈನಲ್ ಆಗಿದ್ದು ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದು , ಉಪ ಚುನಾವಣಾ ಕಣ ರಂಗೇರಿದೆ.Body:

ಅರಸು ನಾಡಿನಲ್ಲಿ ಕಳೆದ ೨೦ ವರ್ಷಗಳ ನಂತರ ಉಪ ಚುನಾವಣೆ ನಡೆಯಲಿದ್ದು , ಕಳೆದ ಬಾರಿ ಜೆಡಿಎಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಎಚ್.ವಿಶ್ವನಾಥ್ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಈಗ ಉಪ ಚುನಾವಣೆ ನಡೆಯುತ್ತಿದ್ದು , ಈಗಾಗಲೇ ಉಪ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದು , ಜೆಡಿಎಸ್ ನಿಂದ ಮೊದಲ ಬಾರಿಗೆ ಜಿ.ಟಿ ದೇವೆಗೌಡ ಕುಟುಂಬದ ಹೊರತಾಗಿ ಹೊಸ ಮುಖ ಶ್ರೀ ಸೋಮಶೇಖರ್ ಜೆಡಿಎಸ್ ನಿಂದ ಟಿಕೆಟ್ ಪಡೆದಿದ್ದು , ಇನ್ನೂ ಬಿಜೆಪಿ ಯಿಂದ ಕಳೆದ ಬಾರಿ ಜೆಡಿಎಸ್ ನಿಂದ ಆಯ್ಕೆಯಾಗಿದ್ದ ಎಚ್.ವಿಶ್ವನಾಥ್ ಪುನಃ ಬಿಜೆಪಿ ಯಿಂದ ಟಿಕೆಟ್ ಪಡೆದಿದ್ದು ಈಗ ಉಪ ಚುನಾವಣೆಯ ಕಣ ರಂಗಾಗಿದೆ. ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಜಿ.ಟಿ ಕುಟುಂಬದಿಂದ ಕೈ ತಪ್ಪಿದ ಜೆಡಿಎಸ್ ಟಿಕೆಟ್

ಒಕ್ಕಲಿಗರ ಪ್ರಾಬಲ್ಯವಿರುವ ಹುಣಸೂರು ಕ್ಷೇತ್ರದಲ್ಲಿ ಜಿ.ಟಿ ಕುಟುಂಬ ಬಿಗಿ ಹಿಡಿತ ಸಾಧಿಸಿದ್ದು , ಜಿ.ಟಿ. ದೇವೆಗೌಡರ ಪುತ್ರ ಹರೀಶ್ ಗೌಡ ಭಾವಿ ಅಭ್ಯರ್ಥಿ ಎಂದೇ ಬಿಂಬಿತವಾಗಿ ಹುಣಸೂರಿನ ಪ್ರತಿಯೊಂದು ಗ್ರಾಮದಲ್ಲೂ ಕೆಲಸ ಮಾಡಿದ್ದರು‌, ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜಿ.ಟಿ.ದೇವೆಗೌಡರು ಉಪ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗದೆ ತಟಸ್ಥವಾಗಿ ಇರುತ್ತೇನೆ ಎಂದು ಘೋಷಿಸಿರುವುದು ಈಗ ಮೂರು ಪಕ್ಷಗಳಿಗೂ ತಲೆ ನೋವು ಆಗಿದ್ದು , ಅವರು ಯಾರಿಗೆ ಪರೋಕ್ಷವಾಗಿ ಬೆಂಬಲ ಕೊಡುತಾರೆ ಎಂಬುದನ್ನು ಕಾದು ನೋಡಬೇಕಾಗಿದೆ‌. ಇನ್ನೂ ಹುಣಸೂರು ಕ್ಷೇತ್ರದಲ್ಲಿ ಒಟ್ಟು ೨,೨೬,೯೨೦ ಮತದಾರರಿದ್ದು ಅದರಲ್ಲಿ ೧,೧೪,೧೪೬ ಪುರಷರು ಹಾಗೂ ೧,೧೨,೭೭೦ ಮಹಿಳಾ ಮತದಾರರಿದ್ದು ಉಪ ಚುನಾವಣಾ ಕಣದಲ್ಲಿ ಈಗ ಪ್ರಮುಖ ಮೂರು ಪಕ್ಷದ ಅಭ್ಯರ್ಥಿಗಳು ಫೈನಲ್ ಆಗಿದ್ದು ನಾಮಪತ್ರದ ನಂತರ ಉಪ ಚುನಾವಣೆ ರಂಗು ಪಡೆಯಲಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.