ETV Bharat / state

ಒಂದೇ ತಿಂಗಳಿನಲ್ಲಿ ಕೋಟ್ಯಧೀಶನಾದ ನಂಜನಗೂಡು ನಂಜುಂಡೇಶ್ವರ - ನಂಜನಗೂಡು ಹುಂಡಿ ಎಣಿಕೆ ಕಾರ್ಯ

ನಂಜನಗೂಡು ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೋಟ್ಯಂತರ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.

hundi-collection-at-nanjundeshwara-temple-touches-crore
ಒಂದೇ ತಿಂಗಳಿನಲ್ಲಿ ಕೋಟ್ಯಾಧೀಶನಾದ ನಂಜನಗೂಡು ನಂಜುಂಡೇಶ್ವರ
author img

By

Published : Sep 17, 2022, 9:49 AM IST

ಮೈಸೂರು: ನಂಜನಗೂಡು ಶ್ರೀ ನಂಜುಂಡೇಶ್ವರ ಒಂದೇ ತಿಂಗಳಿನಲ್ಲಿ ಕೋಟ್ಯಧೀಶ್ವರನಾಗಿದ್ದಾನೆ. ದೇವಾಲಯದ ದಾಸೋಹ ಭವನದಲ್ಲಿ ಶುಕ್ರವಾರ 34 ನಂಜುಂಡೇಶ್ವರನ ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, 1,35,58,975 ರೂ. ಸಂಗ್ರಹವಾಗಿದೆ.

ನಂಜುಂಡೇಶ್ವರಸ್ವಾಮಿ ದೇವಾಲಯದ ಹುಂಡಿ ಎಣಿಕೆ

ಇದರಲ್ಲಿ 131 ಗ್ರಾಂ ಚಿನ್ನ, 4 ಕೆಜಿ 100 ಗ್ರಾಂ ಬೆಳ್ಳಿ, 35 ವಿದೇಶಿ ಕರೆನ್ಸಿ ನಂಜುಂಡೇಶ್ವರನಿಗೆ ಕಾಣಿಕೆಯಾಗಿ ಬಂದಿದೆ. ಪ್ರತಿ ತಿಂಗಳು ಹುಂಡಿ ಎಣಿಕೆಯಲ್ಲಿ ನಿಷೇಧಿತ ನೋಟು ಪತ್ತೆಯಾಗುತ್ತಿತ್ತು. ಆದರೆ, ಈಗ ಎಣಿಕೆ ಮಾಡಿದಾಗ ಅಂತಹ ನೋಟುಗಳು ಕಂಡುಬಂದಿಲ್ಲ. ಹುಂಡಿ ಎಣಿಕೆ ಕಾರ್ಯದಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ದೇವಾಲಯದ ಸಿಬ್ಬಂದಿ ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.