ETV Bharat / state

ಸಂದೇಶ್ ಆಡಿಯೋ ವಿಚಾರ ಸತ್ಯಕ್ಕೆ ದೂರ: ಹರ್ಷ ಮೆಲಂಟಾ - ನಟ ದರ್ಶನ್ ಸ್ನೇಹಿತ ಹರ್ಷ ಮೆಲಂಟಾ

ಸಂದೇಶ್​ ಹೋಟೆಲ್​ ಮಾಲೀಕ ಸಂದೇಶ್ ನಾಗರಾಜ್​ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್​ ಆಡಿಯೋ ವಿಚಾರವಾಗಿ ನಟ ದರ್ಶನ್ ಸ್ನೇಹಿತ ಹರ್ಷ ಮೆಲಂಟಾ ಪ್ರತಿಕ್ರಿಯೆ ನೀಡಿದ್ದಾರೆ. ಆಡಿಯೋದಲ್ಲಿ ಮಾತನಾಡಿರುವ ಎಲ್ಲ ವಿಚಾರಗಳು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.

darshan friend harsha melanta
ನಟ ದರ್ಶನ್ ಸ್ನೇಹಿತ ಹರ್ಷ ಮೆಲಂಟಾ
author img

By

Published : Jul 17, 2021, 12:57 PM IST

Updated : Jul 17, 2021, 1:17 PM IST

ಮೈಸೂರು: ಸಂದೇಶ್ ಅವರ ಆಡಿಯೋದಲ್ಲಿ ಮಾತನಾಡಿರುವ ಎಲ್ಲ ವಿಚಾರಗಳು ಸತ್ಯಕ್ಕೆ ದೂರವಾದುದ್ದು, ಈ ಸಂಬಂಧ ನನಗೆ ಯಾವುದೇ ನೋಟಿಸ್ ಬಂದಿಲ್ಲ. ವಿಚಾರಣೆಗೆ ಕರೆದಾಗ ನಾನು ಖಂಡಿತ ಹೋಗುತ್ತೇನೆ ಎಂದು ನಟ ದರ್ಶನ್ ಸ್ನೇಹಿತ ಹರ್ಷ ಮೆಲಂಟಾ ಸ್ಪಷ್ಟಪಡಿಸಿದ್ದಾರೆ.

ನಟ ದರ್ಶನ್ ಸ್ನೇಹಿತ ಹರ್ಷ ಮೆಲಂಟಾ

ಸಂದೇಶ್ ಹಾಗೂ ಇಂದ್ರಜಿತ್ ಆಡಿಯೋ ವಿಚಾರವಾಗಿ ಶ್ರೀರಾಂಪುರದಲ್ಲಿರುವ ತಮ್ಮ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆಡಿಯೋ ಕೇಳಿದರೆ ಇದು ಸಂದೇಶ್ ಅವರದ್ದಲ್ಲ ಅನ್ನಿಸುತ್ತಿದೆ. ಸಂದೇಶ್ ಹಾಗೂ ನನ್ನ ನಡುವೆ ವ್ಯವಹಾರಿಕವಾಗಿ ಉತ್ತಮ ಸ್ನೇಹ ಇದೆ‌. ನಾನು ಸಂದೇಶ್ ಅವರನ್ನು ಅಣ್ಣ ಅಂತ ಯಾವತ್ತೂ ಕರೆದಿಲ್ಲ. ನಾನು ಯಾವ ಸಾಲವನ್ನೂ ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ದರ್ಶನ್ ಹಲ್ಲೆ ಆರೋಪ ಪ್ರಕರಣ: ಘಟನೆಯ ಸಂಪೂರ್ಣ ವಿವರ ನೀಡಿದ ಹೋಟೆಲ್ ಸಿಬ್ಬಂದಿ, ಮಾಲೀಕ

ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಆರೋಪಕ್ಕೆ ಪ್ರತಿಕ್ರಿಯಿಸಿ, ಅಂದು ದರ್ಶನ್ ಪಾರ್ಟಿ ಕೊಡುವಾಗ ನಾನು ಕುಟುಂಬ ಸಮೇತ ಹೋಗಿದ್ದೆ. ಹೋಟೆಲ್‌ನಲ್ಲಿ ಊಟ ಚೆನ್ನಾಗಿದೆ ಅಂತ ದರ್ಶನ್ ಪಾರ್ಟಿ ಕೊಟ್ಟರು. ಪಾರ್ಟಿಯಲ್ಲಿ 8 ಮಂದಿ ಇದ್ದೆವು. ಸರ್ವ್​​​​ ಮಾಡುವಾಗ ವ್ಯತ್ಯಾಸ ಆಯ್ತು ಅಷ್ಟೇ. ದರ್ಶನ್ ಅವರು ವೇಟರ್​ಗೆ ಬೈಯ್ದಿದ್ದಾರೆ ಅಷ್ಟೇ. ಬಳಿಕ ಸಂದೇಶ್ ಅವರು ಅಲ್ಲಿ ಬಂದು ಎಲ್ಲರನ್ನೂ ಸಮಾಧಾನ ಮಾಡಿದರು. ನಂತರ ರೂಂಗೆ ಹೋದೆವು. ಬೆಳಗ್ಗೆ ತಿಂಡಿ ತಿಂದು ಹೊರ ಬಂದೆವು. ದರ್ಶನ್ ಯಾರ ಮೇಲೂ ಹಲ್ಲೆ ಮಾಡಿಲ್ಲ ಎಂದು ಅಂದಿನ ಘಟನೆ ಕುರಿತು ವಿವರಿಸಿದರು.

Last Updated : Jul 17, 2021, 1:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.