ಮೈಸೂರು: ಹೆಚ್ ಡಿ ಕುಮಾರಸ್ವಾಮಿ ಇದ್ದರೆ ಶಾಸಕ ಸಾ ರಾ ಮಹೇಶ್ ಹೀರೋ, ಅವರು ಇಲ್ಲದಿದ್ದರೆ ಸಾ ರಾ ಮಹೇಶ್ ಜೀರೋ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಲೇವಡಿ ಮಾಡಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಪ್ರತಿನಿಧಿಯಾಗಿ ಸಾ ರಾ ಮಹೇಶ್ ಹೋಗ್ತಿದ್ದಾರೆ. ಕುಮಾರಸ್ವಾಮಿ ಅವರ ಮುಖ ಇಟ್ಕೊಂಡು ಮಹೇಶ್ ಕೆಲಸ ಮಾಡುತ್ತಿದ್ದಾರೆ. ಅವರು ಇಲ್ಲದೇ ಶಕ್ತಿ ತೋರಿಸಲಿ ಎಂದು ಸವಾಲು ಹಾಕಿದರು.
ಜಿ ಟಿ ದೇವೇಗೌಡನ ನಾಯಕತ್ವದಲ್ಲಿ ಬೆಳೆದರೆ ಕಷ್ಟವಾಗಲಿದೆ ಎಂಬ ಚಿಂತೆಯಿಂದ, ಸಾ ರಾ ಮಹೇಶ್ ನಾಯಕತ್ವ ರೂಪಿಸಿಕೊಳ್ಳಲು ಯತ್ನ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಕೂಡ ಮುತ್ತು ಕೊಡುವವಳು ಬಂದಾಗ, ತುತ್ತು ಕೊಡುವವಳನ್ನು ಮರೆಯುತ್ತಿದ್ದಾರೆ. ಪಕ್ಷ ಕಟ್ಟಿದ ಹಳಬರನ್ನ ಮರೆತು, ಹೊಸಬರಿಗೆ ಹೆಚ್ಡಿಕೆ ಮಣೆ ಹಾಕಿದ್ದಾರೆ ಎಂದು ನೋವನ್ನು ಹೊರಹಾಕಿದರು.
ಮೇಯರ್ ಚುನಾವಣೆಗೆ ನನ್ನನ್ನು ಸಂಪರ್ಕಿಸಿಲ್ಲ:
ಮೇಯರ್ ಚುನಾವಣೆಗೆ ನನ್ನ ಪಕ್ಷದವರು ಹಾಗೂ ಸಾ ರಾ ಮಹೇಶ್ ನನ್ನನ್ನು ಸಂಪರ್ಕಿಸಿಲ್ಲ. ಆದರೆ, ನಾನು ಪಕ್ಷದ ವಿರುದ್ಧ ಮತ ಹಾಕುವುದಿಲ್ಲ, ಪಕ್ಷದ ಪರವಾಗಿಯೇ ಇರ್ತೇನೆ ಎಂದರು.
ಇದನ್ನೂ ಓದಿ:ಮುಂದಿನ ಐದು ವರ್ಷವೂ ನಾವೇ ಅಧಿಕಾರ ನಡೆಸುತ್ತೇವೆ : ಸಚಿವ ಉಮೇಶ್ ಕತ್ತಿ ವಿಶ್ವಾಸ