ETV Bharat / state

ನಮ್ಮೂರಿನಲ್ಲಿ ನಾನು ರಾಮ ಮಂದಿರ ಕಟ್ಟುತ್ತಿದ್ದೇನೆ, ಇದರಲ್ಲಿ ಏನು ವಿಶೇಷ : ಸಿದ್ದರಾಮಯ್ಯ - ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ನಾನು ಸಹ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ. ಜನರು ತಮ್ಮ ತಮ್ಮ ಊರುಗಳಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದಾರೆ. ಇದರಲ್ಲಿ ಏನು ವಿಶೇಷ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿತ್ತಿದ್ದಾರಲ್ಲ ಅದಕ್ಕೆ ಏನು ವಿಶೇಷ. ಇದು ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಅಷ್ಟೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು .

former-cm-siddaramaiah-statement-on-ram-mandir-construction
ರಾಮ ಮಂದಿರ ನಿರ್ಮಾಣ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ
author img

By

Published : Feb 20, 2021, 1:11 PM IST

ಮೈಸೂರು: ನಾನು ಹುಟ್ಟಿದ ಊರಿನಲ್ಲಿ ರಾಮ ಮಂದಿರ ಕಟ್ಟಿಸುತಿದ್ದೇನೆ. ಗ್ರಾಮದ ಜನರು ವಂತಿಗೆ ನೀಡುತ್ತಿದ್ದಾರೆ. ಇದರಲ್ಲಿ ಏನು ವಿಶೇಷ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ .

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಜನರು ರಾಮ ಮಂದಿರಕ್ಕೆ ದೇಣಿಗೆ ನೀಡುತ್ತಿದ್ದಾರೆಯೇ ಹೊರತು ಬಿಜೆಪಿಗೆ ಅಲ್ಲ. ಸಾರ್ವಜನಿಕರ ಹಣ ದೇಣಿಗೆ ಪಡೆದ ಮೇಲೆ ಲೆಕ್ಕ ಕೇಳುವ ಹಕ್ಕು ನಮಗೂ ಇರುತ್ತದೆ. ಹಿಂದೆ ದೇಣಿಗೆ ಸಂಗ್ರಹಿಸಿದ ಲೆಕ್ಕ ಕೊಟ್ಟಿಲ್ಲ, ಈ ಬಾರಿ ಲೆಕ್ಕವನ್ನು ಕೂಡಲೇಬೇಕು. ಸಾರ್ವಜನಿಕ ಹಣವಾಗಿದ್ದರಿಂದ ಲೆಕ್ಕ ಕೇಳುತ್ತಿದ್ದೇವೆ ಎಂದರು.

ರಾಮ ಮಂದಿರ ನಿರ್ಮಾಣ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ನಾನು ಸಹ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ. ಜನರು ತಮ್ಮ ತಮ್ಮ ಊರುಗಳಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದಾರೆ ಇದರಲ್ಲಿ ಏನು ವಿಶೇಷ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿತ್ತಿದ್ದಾರಲ್ಲ ಅದಕ್ಕೆ ಏನು ವಿಶೇಷ. ಇದು ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.

ಇನ್ನು ಕೊರೊನಾ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಇದರ ಬಗ್ಗೆ ವಿಧಾನ ಸಭೆಯಲ್ಲಿ ಕೇಳಿದರೆ ಸರಿಯಾಗಿ ಸರ್ಕಾರ ಉತ್ತರವನ್ನೇ ಕೊಡಲಿಲ್ಲ. ಸರ್ಕಾರಕ್ಕೆ ಗಂಭೀರತೆ ಇಲ್ಲ ,ಕೊರೊನಾ ವಿಚಾರದಲ್ಲಿ ಭ್ರಷ್ಟಾಚಾರ ಮಾಡುವುದಷ್ಟೇ ಗೊತ್ತು ಎಂದು ಮತ್ತೊಮ್ಮೆ ವಾಗ್ದಾಳಿ ನಡೆಸಿದರು .

ಓದಿ : ರಾಮ ಮಂದಿರ ವಿರೋಧಿಸುವವರು ರಾವಣನ ಪಕ್ಷದವರಾಗುತ್ತೀರಿ‌: ಕೇಂದ್ರ ಸಚಿವ ಸದಾನಂದ ಗೌಡ

ಮೈಸೂರು ಪಾಲಿಕೆ ಮೇಯರ್ ಚುನಾವಣೆ ವಿಚಾರದಲ್ಲಿ ಹಿಂದಿನ ಒಪ್ಪಂದದಂತೆ ಜೆಡಿಎಸ್ ತಾನಾಗಿ ಮೈತ್ರಿಗೆ ಬಂದರೆ ಮೈತ್ರಿ ಮಾಡಿಕೊಳ್ಳಿ. ಹಳೆಯ ಒಪ್ಪಂದದಂತೆ ಕಾಂಗ್ರೆಸ್​​ಗೆ ಮೇಯರ್ ಸ್ಥಾನ ಕೊಟ್ಟರೆ ಮೈತ್ರಿ ಮುಂದುವರೆಯಲಿ ಎಂದು ಹೇಳಿದ್ದೇನೆ, ಜೊತೆಗೆ ಎಲ್ಲರೂ ಒಟ್ಟಾಗಿರಿ ಜಗಳ ಮಾಡಿಕೊಳ್ಳಬೇಡಿ ಎಂದು ಸಿದ್ದರಾಮಯ್ಯ ಹೇಳುವ ಮೂಲಕ ಮೇಯರ್ ಚುನಾವಣೆ ಮತ್ತೊಮ್ಮೆ ಕುತೂಹಲಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.