ETV Bharat / state

ದಸರಾ ಫಲಪುಷ್ಪ ಪ್ರದರ್ಶನ: 2 ಲಕ್ಷ ಹೂಗಳಲ್ಲಿ ಅರಳಿದ ರಾಷ್ಟ್ರಪತಿ ಭವನ - ಈಟಿವಿ ಭಾರತ ಕನ್ನಡ

ಮೈಸೂರು ದಸರಾ ಅಂಗವಾಗಿ ಆಯೋಜಿಸಿರುವ ಫಲಪುಷ್ಫ ಪ್ರದರ್ಶನಕ್ಕೆ ಎಲ್ಲೆಡೆಯಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ.ಪ್ರದರ್ಶನದಲ್ಲಿ ವಿವಿಧ ಪುತ್ಥಳಿಗಳು,ಹೂವುಗಳಲ್ಲಿ ಅರಳಿದ ರಾಷ್ಟ್ರಪತಿ ಭವನ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

flower-show-at-mysore-dasara
ದಸರಾ ಫಲಪುಷ್ಪ ಪ್ರದರ್ಶನ : 2 ಲಕ್ಷ ಹೂಗಳಲ್ಲಿ ಅರಳಿದ ರಾಷ್ಟ್ರಪತಿ ಭವನ
author img

By

Published : Oct 1, 2022, 5:29 PM IST

ಮೈಸೂರು : ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ 2 ಲಕ್ಷ ಹೂವುಗಳಲ್ಲಿ ರಾಷ್ಟ್ರಪತಿ ಭವನ ಹಾಗೂ ಬಣ್ಣ ಬಣ್ಣದ ಹೂವುಗಳ ನಡುವಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾವಚಿತ್ರಗಳು ಜನರನ್ನು ಆಕರ್ಷಣೆ ಮಾಡುತ್ತಿವೆ.

ಫಲಪುಷ್ಪ ಪ್ರದರ್ಶನದಲ್ಲಿ ಮಿಂಚುತ್ತಿರುವ ವಿವಿಧ ಪುತ್ಥಳಿಗಳು : ಈ ಬಾರಿಯ ದಸರಾ ಫಲಪುಷ್ಪ ಪ್ರದರ್ಶನ ನಗರದ ಕುಪ್ಪಣ್ಣ ಪಾರ್ಕ್ ನಲ್ಲಿ ಅಕ್ಟೋಬರ್ 05 ವರೆಗೆ ನಡೆಯಲಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ನಡೆಯುತ್ತಿರುವ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಡಾ ರಾಜ್ ಕುಮಾರ ಅವರ ಗಾಜನೂರಿನ ಮನೆ, ಚಾಮುಂಡಿ ಬೆಟ್ಟ, ನಂದಿ ವಿಗ್ರಹ, ದಿವಂಗತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವಿವಿಧ ಭಂಗಿಯ 5 ಪುತ್ಥಳಿಗಳನ್ನು ಬಣ್ಣ ಬಣ್ಣದ ಹೂವುಗಳ ಮಧ್ಯೆ ಇರಿಸಲಾಗಿದೆ.

ದಸರಾ ಫಲಪುಷ್ಪ ಪ್ರದರ್ಶನ : 2 ಲಕ್ಷ ಹೂಗಳಲ್ಲಿ ಅರಳಿದ ರಾಷ್ಟ್ರಪತಿ ಭವನ

50 ಸಾವಿರ ವಿವಿಧ ಬಗೆಯ ಫಲಪುಷ್ಪ ಪ್ರದರ್ಶನ: ಇದರ ಜೊತೆಗೆ ಮಕ್ಕಳನ್ನು ಸೆಳೆಯಲು ವಿವಿಧ ಪ್ರಾಣಿಗಳು ಹಾಗೂ ಪಕ್ಷಿಗಳು ಜೊತೆಗೆ ಗೊಂಬೆಗಳನ್ನು ಹೂವಿನಿಂದ ನಿರ್ಮಿಸಲಾಗಿದ್ದು, ಪ್ರಮುಖವಾಗಿ 7 ಅಡಿ ಉದ್ದದ ಜೇನುಹುಳು, 12 ಅಡಿ ಉದ್ದದ ಜಿರಾಫೆ, ದಪ್ಪ ಮೆಣಸಿನಕಾಯಿ ರೂಪದ ಮನೆ ನಿರ್ಮಿಸಲಾಗಿದೆ. ಜೊತೆಗೆ ಸುಮಾರು 50 ಸಾವಿರ ವಿವಿಧ ಬಗೆಯ ಫಲಪುಷ್ಪ ಪ್ರದರ್ಶನ ಮಾಡಲಾಗುತ್ತಿದೆ.

2 ಲಕ್ಷ ಹೂವುಗಳಲ್ಲಿ ಅರಳಿದ ರಾಷ್ಟ್ರಪತಿ ಭವನ : ಈ ಬಾರಿ ನಾಡಹಬ್ಬ ದಸರಾ ಮಹೋತ್ಸವವನ್ನು ದೇಶದ ಮೊದಲ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡಿದರು. ಇದಕ್ಕೆ ಗೌರವ ಸೂಚಕವಾಗಿ ರೈತರಿಂದಲೇ ನೇರವಾಗಿ ಖರೀದಿ ಮಾಡಿದ ವಿವಿಧ ಬಗೆಯ 2 ಲಕ್ಷ ಹೂವುಗಳಿಂದ ನಿರ್ಮಾಣ ಮಾಡಲಾಗಿರುವ ರಾಷ್ಟ್ರಪತಿ ಭವನ ದಸರಾ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣಾ ಬಿಂದುವಾಗಿದೆ.

ಇದನ್ನೂ ಓದಿ : ವಿಶ್ವ ವಿಖ್ಯಾತ ದಸರಾ: ಮೆರುಗು ಕಟ್ಟಿದ ರೈತ ಕ್ರೀಡಾಕೂಟ ಉತ್ಸವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.