ETV Bharat / state

ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ತಂಬಾಕು ಬೆಳೆಗಾರ - Mysore crime news

ಪಿರಿಯಾಪಟ್ಟಣ ತಾಲೂಕಿನ ಬೋಗನಹಳ್ಳಿಯಲ್ಲಿ ಗ್ರಾಪಂ ಮಾಜಿ ಸದಸ್ಯ, ಜೆಡಿಎಸ್​​​ ಮುಖಂಡ ಪುಟ್ಟರಾಜು ಎಂಬುವರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

farmer-committed-suicide-in-mysore-district
ಆತ್ಮಹತ್ಯೆಗೆ ಶರಣಾದ ತಂಬಾಕು ಬೆಳೆಗಾರ
author img

By

Published : Jan 4, 2021, 9:00 PM IST

ಮೈಸೂರು: ಸಾಲಬಾಧೆ ತಾಳಲಾರದೆ ತಂಬಾಕು ಬೆಳೆಗಾರ ನೇಣಿಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ...ಮೈಸೂರು: ಲಂಚ ಪಡೆಯುತ್ತಿರುವಾಗ ಎಸಿಬಿ ಬಲೆಗೆ ಬಿದ್ದ ಸರ್ವೆಯರ್

ರೈತ, ಗ್ರಾಪಂ ಮಾಜಿ ಸದಸ್ಯ, ಜೆಡಿಎಸ್​​​ ಮುಖಂಡ ಪುಟ್ಟರಾಜು (41) ಆತ್ಮಹತ್ಯೆ ಮಾಡಿಕೊಂಡವರು. ಮೃತರಿಗೆ 4 ಎಕರೆ ಜಮೀನಿದ್ದು, ಪಟ್ಟಣದ ಎಸ್​​ಬಿಐ, ಎಡಿಬಿ ಬ್ಯಾಂಕ್​​ನಲ್ಲಿ 8 ಲಕ್ಷ ಬೆಳೆ ಸಾಲ ಮತ್ತು ಕೆ.ಆರ್. ನಗರದ ಖಾಸಗಿ ಬ್ಯಾಂಕ್​​ನಲ್ಲಿ 4 ಲಕ್ಷ ಬೆಳೆ ಸಾಲ ಮಾಡಿದ್ದರು.

ಕಳೆದ 2 ವರ್ಷದಿಂದ ತಂಬಾಕು ಬೆಳೆಗೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬಾರದ ಕಾರಣ ಮನನೊಂದು ಮನೆಯಲ್ಲಿ ಯಾರೂ ಇಲ್ಲದಿರುವಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಶೋಭಾ ಪಟ್ಟಣದ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.