ಮೈಸೂರು: ಎಷ್ಟೇ ಮನವಿ ಮಾಡಿದರೂ ಕಳೆದ ಒಂದು ತಿಂಗಳಿಂದ ಕೆಟ್ಟು ಹೋಗಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ (ಟಿಸಿ) ಬದಲಾಯಿಸಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಹನಗೂಡು ಹೋಬಳಿಯ ಚಿಕ್ಕ ಹೆಜ್ಜುರೂ ಗ್ರಾಮದ ರೈತರು ಆರೋಪಿಸಿದ್ದಾರೆ.
ಚಿಕ್ಕ ಹೆಜ್ಜುರೂ ಗ್ರಾಮ ಹುಣಸೂರು ತಾಲೂಕಿನ ಹನಗೂಡು ಹೋಬಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮ. ಇಲ್ಲಿ ಈ ಟ್ರಾನ್ಸ್ ಫಾರ್ಮರ್ ಹಾಳಾಗಿದ್ದರಿಂದ ಹಾಡಿ ಹಾಗೂ ಚಿಕ್ಕ ಹೆಜ್ಜುರೂ ಗ್ರಾಮಕ್ಕೆ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಅಧಿಕಾರಿಗಳ ವರ್ತನೆಯಿಂದ ರೈತರು ಬೇಸತ್ತಿದ್ದು, ಉಸ್ತುವಾರಿ ಸಚಿವರ ಗಮನಕ್ಕೆ ತರಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.