ETV Bharat / state

ದಾಂಪತ್ಯ ಕಲಹ: ನೇಣಿಗೆ ಶರಣಾದ ರೈಲ್ವೆ ಪೊಲೀಸ್​ ಪೇದೆ - kannadanews

ದಾಂಪತ್ಯ ಕಲಹದಿಂದ ಮನನೊಂದು ರೈಲ್ವೆ ಪೊಲೀಸ್​ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೇದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಾಂಪತ್ಯ ಕಲಹಕ್ಕೆ ಬೇಸತ್ತು ಪೇದೆ ಆತ್ಮಹತ್ಯೆ
author img

By

Published : Jun 25, 2019, 6:58 PM IST

ಮೈಸೂರು: ದಾಂಪತ್ಯ ಕಲಹದಿಂದ ರೈಲ್ವೆ ಪೊಲೀಸ್​ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೇದೆ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಕೆ.ಆರ್. ನಗರ ತಾಲೂಕಿನ ಹೊಸ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.

ದಾಂಪತ್ಯ ಕಲಹಕ್ಕೆ ಬೇಸತ್ತು ಪೇದೆ ಆತ್ಮಹತ್ಯೆ

ಗೋಪಿಕೃಷ್ಣ (35) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಪೇದೆ. ಇವರು ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರದ ಗ್ರಾಮದವರಾಗಿದ್ದು, ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸ್​ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ವರ್ಷ ಮದುವೆಯಾಗಿದ್ದರು. ಆದ್ರೆ ಪತ್ನಿ ಈತನ ಜೊತೆ ಸಂಸಾರ ನಡೆಸಲು ಇಷ್ಟವಿಲ್ಲ ಎಂದು ತವರು ಮನೆಗೆ ಹೋಗಿದ್ದರು ಎನ್ನಲಾಗಿದೆ. ವಾಪಸ್​ ಬರುವಂತೆ ಎಷ್ಟೇ ಕರೆದರೂ ಮನೆಗೆ ಬಾರದ ಹಿನ್ನೆಲೆ ನೊಂದು ನಿನ್ನೆ ರಾತ್ರಿ ತಮ್ಮ ಜಮೀನಿನ ಮರದಲ್ಲಿ ನೇಣುಬಿಗಿದುಕೊಂಡು ಗೋಪಿಕೃಷ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಮೃತನ ತಂದೆ ಸೊಸೆಯ ಕಿರುಕುಳದಿಂದ ನನ್ನ ಮಗ ಸಾವನಪ್ಪಿದ್ದಾನೆ ಎಂದು ಸಾಲಿಗ್ರಾಮ ಠಾಣೆಯಲ್ಲಿ ದೂರು ನೀಡಿದ್ದಾರೆ. ಜೊತೆಗೆ ಕುಟುಂಬಸ್ಥರು ಹಾಗೂ ನನ್ನ ಮಗನ ಸಾವಿಗೆ ಕಾರಣರಾದ ಅವನ ಪತ್ನಿಯನ್ನು ಬಂಧಿಸಬೇಕು, ಸ್ಥಳಕ್ಕೆ ಸಚಿವ ಸಾ.ರಾ.ಮಹೇಶ್ ಆಗಮಿಸಬೇಕೆಂದು ಗ್ರಾಮಸ್ಥರು ಭೇರ್ಯದ ಗಾಂಧಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.ಸ್ಥಳದಲ್ಲಿ,ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು,ಬಿಗಿ ಪೊಲೀಸ್​ ಬಂದೋಬಸ್ತ್ ಏರ್ಪಡಿಸಲಾಗಿದೆ.

Intro:ಮೈಸೂರು: ದಾಂಪತ್ಯ ಕಲಹದಿಂದ ರೈಲ್ವೆ ಪೋಲಿಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೇದೆ ತಡರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್. ನಗರ ತಾಲ್ಲೂಕಿನ ಹೊಸ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.
Body:
ಹೀಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ ಗೋಪಿಕೃಷ್ಣ (೩೫) ವರ್ಷ.
ಈತ ಕೆ.ಆರ್.ನಗರ ತಾಲ್ಲೂಕಿನ ಹೊಸ ಅಗ್ರಹಾರದ ಗ್ರಾಮದವನಾಗಿದ್ದು ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೋಲಿಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದನು.
ಕಳೆದ ೧ ವರ್ಷದ ಹಿಂದೆ ಮದುವೆಯಾಗಿದ್ದ ಆದರೂ ಪತ್ನಿ ಈತನ ಜೊತೆ ಸಂಸಾರ ನಡೆಸಲು ಇಷ್ಟವಿಲ್ಲ ಎಂದು ತವರು ಮನೆಗೆ ಹೋಗಿದ್ದಳು, ಎಷ್ಟೇ ಕರೆದರು ಮನೆಗೆ ಬಾರದ ಹಿನ್ನೆಲೆಯಲ್ಲಿ ನೆನ್ನೆ ರಾತ್ರಿ ತಮ್ಮ‌ ಜಮೀನಿನ ಮರದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿತದ್ದಾನೆ. ಈ ಸಂಬಂಧ ಮೃತನ ತಂದೆ ಪುಟ್ಟರಾಮೇಗೌಡ ಸೊಸೆಯ ಕಿರುಕುಳದಿಂದ ನನ್ನ ಮಗ ಸಾವನಪ್ಪಿದ್ದಾನೆ ಎಂದು ಸಾಲಿಗ್ರಾಮ ಠಾಣೆಯಲ್ಲಿ ದೂರು ನೀಡಿದ್ದಾರೆ. ಜೊತೆಗೆ ಕುಟುಂಬಸ್ಥರು ಹಾಗೂ ನನ್ನ ಮಗನ ಸಾವಿಗೆ ಕಾರಣರಾದ ಪತ್ನಿಯನ್ನು ಬಂಧಿಸಬೇಕು, ಸ್ಥಳಕ್ಕೆ ಸಚಿವ ಸಾ.ರಾ.ಮಹೇಶ್ ಆಗಮಿಸಬೇಕೆಂದು ಗ್ರಾಮಸ್ಥರು ಭೇರ್ಯದ ಗಾಂಧಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಸ್ಥಳದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.