ಮೈಸೂರು: ಠಾಣೆಯಲ್ಲಿಯೇ ಮಹಿಳಾ ಕಾನ್ಸ್ಟೇಬಲ್ಗೆ ಸೀಮಂತ ಮಾಡುವ ಮೂಲಕ ಪೊಲೀಸ್ ಠಾಣೆಗಳು ಜನಸ್ನೇಹಿ ಆಗಿರುವುದರ ಜೊತೆಗೆ ಸಿಬ್ಬಂದಿ ಆತ್ಮೀಯತೆಯಿಂದ ಇದ್ದಾರೆ ಎಂದು ಪೊಲೀಸರು ತೋರಿಸಿದ್ದಾರೆ.
ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ರೇಖಾ ಅವರಿಗೆ ಸೀಮಂತ ಮಾಡುವ ಮೂಲಕ ಮಹಿಳಾ ಮತ್ತು ಪುರುಷ ಪೊಲೀಸ್ ಸಿಬ್ಬಂದಿ ಸಂಭ್ರಮಪಟ್ಟರು. ಪೊಲೀಸ್ ಕಾನ್ಸ್ಟೇಬಲ್ ರೇಖಾ ಅವರಿಗೆ ಕೈ ಬಳೆ ತೊಡಿಸಿ, ಹೂ ಮುಡಿಸುವ ಮೂಲಕ ಸೀಮಂತ ಶಾಸ್ತ್ರ ಮಾಡಲಾಯಿತು. ಸಬ್ ಇನ್ಸ್ಪೆಕ್ಟರ್ ದಿವಾಕರ್, ಪಿಎಸ್‌ಐಗಳಾದ ರಾಜು, ಲೀಲಾವತಿ ನೇತೃತ್ವದಲ್ಲಿ ಸೀಮಂತ ಕಾರ್ಯ ನಡೆಯಿತು.
ಠಾಣೆಯ ಎಲ್ಲಾ ಸಿಬ್ಬಂದಿ ಶುಭ ಹಾರೈಸಿದ ಪರಿಗೆ ರೇಖಾ ಭಾವುಕರಾದರು. ಬಳಿಕ ಮಾತನಾಡಿ, ಮನೆಯಲ್ಲಿ ಸಿಗದ ಈ ರೀತಿಯ ಆತ್ಮೀಯತೆ, ಠಾಣೆಯಲ್ಲಿ ಸಿಕ್ಕಿದೆ. ಪೊಲೀಸ್ ಠಾಣೆಗಳು ಜನಸ್ನೇಹಿ ಮಾತ್ರವಲ್ಲ. ಸಿಬ್ಬಂದಿ ನಡುವಿನ ಸ್ನೇಹ ಬಾಂಧವ್ಯಕ್ಕೂ ಸಾಕ್ಷಿಯಾಗಿದೆ ಎಂದರು.
ಶಿವಮೊಗ್ಗ ಜಿಲ್ಲೆಯ ಸಾಗರ ನಿವಾಸಿಯಾಗಿರುವ ರೇಖಾ, ಕಳೆದ 4 ವರ್ಷಗಳಿಂದ ದೇವರಾಜ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೇಖಾ ಪತಿ ರಾಜೇಶ್ ಬೆಂಗಳೂರಿನ ಬಿಎಂಟಿಸಿಯಲ್ಲಿ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.