ETV Bharat / state

ನಂಜನಗೂಡಿನ ಆ ಲಕ್ಷ್ಮಿ ಇನ್ನೂ ವಾಪಸ್​​​​ ಬಂದಿಲ್ಲ ಯಾಕೆ, ಯಾರವಳು? - kannada news

ಇಲ್ಲೊಂದು ಆನೆ ಇತ್ತು. ಬರುವ ಭಕ್ತಾದಿಗಳಿಗೆ ಆಶೀರ್ವಾದ ಮಾಡುತ್ತಿತ್ತು. ಅದು ಈಗ ಎಲ್ಲಿ ಹೋಯ್ತು ಅಂದ್ರೆ ಗೊತ್ತಿಲ್ಲ ಅಂತಾರೆ ಅಲ್ಲಿನ ಮಂದಿ. ಕಳೆದ ಎರಡು ವರ್ಷದಿಂದ ಇಲ್ಲಿ ಕಾಣುತ್ತಿಲ್ಲ. ಎಲ್ಲಿಗೆ ಹೋಯ್ತು, ಮತ್ತೆ ಇಲ್ಲಿಗೆ ಯಾವಾಗ ಬರುತ್ತದೆ ಆ ಆನೆ?

ನಂಜನಗೂಡಿನ ಆ ಲಕ್ಷ್ಮಿ ಇನ್ನು ವಾಪಸ್ಸು ಬಂದಿಲ್ಲ ಯಾಕೆ...?
author img

By

Published : May 31, 2019, 3:21 AM IST

ಮೈಸೂರು: ಇಲ್ಲೊಂದು ಆನೆ ಇತ್ತು. ಬರುವ ಭಕ್ತಾದಿಗಳಿಗೆ ಆಶೀರ್ವಾದ ಮಾಡುತ್ತಿತ್ತು. ಅದು ಈಗ ಎಲ್ಲಿ ಹೋಯ್ತು ಅಂದ್ರೆ ಗೊತ್ತಿಲ್ಲ ಅಂತಾರೆ ಅಲ್ಲಿನ ಮಂದಿ. ಕಳೆದ ಎರಡು ವರ್ಷದಿಂದ ಇಲ್ಲಿ ಕಾಣುತ್ತಿಲ್ಲ. ಎಲ್ಲಿಗೆ ಹೋಯ್ತು, ಮತ್ತೆ ಇಲ್ಲಿಗೆ ಯಾವಾಗ ಬರುತ್ತದೆ ಆ ಆನೆ?

ಹೌದು, ನಂಜನಗೂಡು ತಾಲೂಕಿನ ನಂಜುಂಡೇಶ್ವರ ದೇವಸ್ಥಾನದಲ್ಲಿದ್ದ ಆನೆ ಕಳೆದ ಎರಡು ವರ್ಷಗಳಿಂದ ಕಾಣುತ್ತಿಲ್ಲ. ಈ ಹಿಂದೆ ಕಾಲು ನೋವಿನ ಚಿಕಿತ್ಸೆಗಾಗಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಆನೆ ಶಿಬಿರಕ್ಕೆ ಆ ಹೆಣ್ಣು ಆನೆ 'ಲಕ್ಷ್ಮಿ'ಯನ್ನು ಕರೆದುಕೊಂಡು ಹೋಗಲಾಗಿತ್ತು.

ನಂಜನಗೂಡಿನ ಆ ಲಕ್ಷ್ಮಿ ಇನ್ನು ವಾಪಸ್​​ ಬಂದಿಲ್ಲ

ಆದರೆ ಎರಡು ವರ್ಷಗಳಿಂದ ಆನೆಯ ಕಾಲಿಗೆ ಚಿಕಿತ್ಸೆ ಆಗಿಲ್ಲವೇ? ಅಥವಾ ಆನೆಯನ್ನು ಇಲ್ಲಿಗೆ ಕಳುಹಿಸಿದಿಲ್ಲವೇ ಎಂಬ ಹಲವಾರು ಪ್ರಶ್ನೆಗಳು ದೇವಾಸ್ಥಾನಕ್ಕೆ ಬರುವ ಭಕ್ತಾದಿಗಳಲ್ಲಿ ಮೂಡುತ್ತಿವೆ.

ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಬರುವ ಹಲವಾರು ಮಂದಿ ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದ ಆನೆ ಇದೀಗ ಅಲ್ಲಿಂದ ಮರೆಯಾಗಿದೆ. ಆ ಲಕ್ಷ್ಮಿ ಹೆಸರಿನ ದೇವಸ್ಥಾನದ ಆನೆ ಬರುವ ಭಕ್ತಾದಿಗಳಿಗೆ ಆಶೀರ್ವಾದ ಮಾಡುತ್ತಿತ್ತು. ಆದರೀಗ ಎರಡು ವರ್ಷಗಳಿಂದ ಆನೆ ನೋಡುವ ಸೌಭಗ್ಯ ಭಕ್ತರಿಗೆ ಇಲ್ಲದಾಗಿದೆ. ಇನ್ನು ಮೈಸೂರು ಜಿಲ್ಲೆಯಾದ್ಯಂತ ಯಾವ ದೇವಸ್ಥಾನಕ್ಕೂ ಆನೆ ಸಾಕುವ ಅನುಮತಿ ನೀಡಿರಲಿಲ್ಲ. ಆದ್ರೆ ನಂಜುಂಡೇಶ್ವರ ದೇವಸ್ಥಾನಕ್ಕೆ ಮಾತ್ರ ಆನೆ ನೀಡಲಾಗಿತ್ತು.

Intro:ಆನೆ ಸ್ಟೋರಿ

Body:ಆನೆ ಸ್ಟೋರಿ

Conclusion:ಇಲ್ಲೊಂದು ಆನೆ ಇತ್ತಲ್ಲ ಎಲ್ಲೊಯ್ತು...ಅಂದ್ರೆ ಗೊತ್ತಿಲ್ಲ ಅಂತಾರೆ!
ಮೈಸೂರು: ಇಲ್ಲೊಂದು ಆನೆ ಇತ್ತು ಬರುವ ಭಕ್ತಾಧಿಗಳಿಗೆ ಆಶೀರ್ವಾದ ಮಾಡುತ್ತಿತ್ತು.ಅದು ಈಗ ಎಲ್ಲಿ ಹೋಯ್ತು ಅಂದ್ರೆ ಗೊತ್ತಿಲ್ಲ.ಎರಡು ವರ್ಷದಿಂದ ಹೋಯ್ತು ಮತ್ತೆ ಇಲ್ಲಿಗೆ ಬರುವುದೇ ಅನುಮಾನ...!
ಹೌದು, ದಕ್ಷಿಣಕಾಶಿಯೆಂದು ನಂಜನಗೂಡು ತಾಲ್ಲೂಕಿನ ನಂಜುಂಡೇಶ್ವರ ದೇವಸ್ಥಾನ ಹೆಣ್ಣು ಆನೆ 'ಲಕ್ಷ್ಮಿ'ಯನ್ನು ಎರಡು ವರ್ಷಗಳ ಹಿಂದೆ ಕಾಲು ನೋವಿನ ಚಿಕಿತ್ಸೆಗಾಗಿ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಆನೆ ಶಿಬಿರಕ್ಕೆ ಕರೆದುಕೊಂಡು ಹೋಗಲಾಯಿತು.
ಆದರೆ ಎರಡು ವರ್ಷಗಳಿಂದ ಆನೆಯ ಕಾಲಿಗೆ ಚಿಕಿತ್ಸೆ ಆಗಿಲ್ಲವೇ , ಅಥವಾ ಆನೆಯನ್ನು ಇಲ್ಲಿಗೆ ಕಳುಹಿಸಿದಿಲ್ಲವೇ , ಯಾಕೆ ಇನ್ನು ಕರೆತಂದಿಲ್ಲ, ಎಂಬ ಹೀಗೆ ಹಲವಾರು ಪ್ರಶ್ನೆಗಳು ಆನೆ ಟೆಂಟ್ ಬಳಿ ತೆರಳುವ ಭಕ್ತಾದಿಗಳು ಸುತ್ತಮುತ್ತಲ ವ್ಯಾಪಾರಿಗಳಿಗೆ ಕೇಳುವ ಪ್ರಶ್ನೆಯಾಗಿದೆ.
ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಬರುವ ಹಲವಾರು ಮಂದಿ ಭಕ್ತಾದಿಗಳು ದರ್ಶನ ಪಡೆದು, ದೇವಸ್ಥಾನದ ಸಮೀಪವೇ ಕಟ್ಟಿ ಹಾಕಿರುವ ಆನೆ ನೋಡಿ ಆಶೀರ್ವಾದ ಪಡೆದ ಮಕ್ಕಳು,ಮೊಮ್ಮಕ್ಕಳಿಗೆ ತೋರಿಸಿ ಸಂಭ್ರಮ‌ ಪಡುತ್ತಿದ್ದರು.ಆದರೀಗ ಎರಡು ವರ್ಷಗಳಿಂದ ಆನೆ ನೋಡುವ ಸೌಭಗ್ಯ ಇಲ್ಲದಾಗಿದೆ.
ಮೈಸೂರಿನ ಜಿಲ್ಲೆಯಾದ್ಯಂತ ಯಾವ ದೇವಸ್ಥಾನಕ್ಕೂ ಆನೆ ಸಾಕುವ ಅನುಮತಿ ನೀಡಿರಲಿಲ್ಲ.ನಂಜುಂಡೇಶ್ವರ ದೇವಸ್ಥಾನಕ್ಕೆ ಮಾತ್ರ ಆನೆ ನೀಡಲಾಗಿತ್ತು.ಇದರಿಂದ ದೇವಸ್ಥಾನ ಹಾಗೂ ಆನೆಯ ಭಕ್ತಿ ಭಕ್ತಾದಿಗಳಲ್ಲಿ ಮೂಡಿತ್ತು.ಆದರೀಗ ಎರಡು ವರ್ಷದ ಬರುತ್ತಿರುವ ಭಕ್ತಾದಿಗಳು ಆನೆ ಎಲ್ಲಿಗೆ ಎಂಬ ಪ್ರಶ್ನೆಗಳನ್ನು ಸುತ್ತಮುತ್ತಲ ಭಕ್ತಾರಿಗೆ ಕೇಳುತ್ತಿದ್ದಾರೆ.
ಕಾಲು ಚಿಕಿತ್ಸೆಗೆಂದು ಕರೆದೊಯ್ದ ಆನೆಗೆ ಎರಡು ವರ್ಷಗಳಿಂದ ಎಂತಹ ಚಿಕಿತ್ಸೆ ಕೊಡಲಾಗುತ್ತಿದೆ.ನಂಜನಗೂಡು ದೇವಸ್ಥಾನಕ್ಕೆ ಲಕ್ಷ್ಮಿ ಆನೆ ಕರೆತರಲು ಅಧಿಕಾರಿಗಳಿಗೆ ಮನಸ್ಸಿಲ್ಲವೇ ಎಂಬ ಅನುಮಾನ ಭಕ್ತಾದಿಗಳಲ್ಲಿ ಕಾಡಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.