ಮೈಸೂರು : ಒಂಟಿ ಸಲಗವೊಂದು ತೋಟದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ಗಳ ಮೇಲೆ ದಾಳಿ ಮಾಡಿರುವ ಘಟನೆ ನಾಗರಹೊಳೆ ಬಳಿಯ ಮುದಗನೂರು ಗ್ರಾಮದಲ್ಲಿ ನಡೆದಿದೆ.
ಒಂಟಿ ಸಲಗ ಒಂದು ಭಾನುವಾರ ತೋಟದ ಮನೆ ಬಳಿ ನಿಲ್ಲಿಸಿದ್ದ ಟ್ರ್ಯಾಕ್ಟರ್ಗಳ ಮೇಲೆ ದಾಳಿ ನಡೆಸಿದ್ದು ಟ್ರ್ಯಾಕ್ಟರ್ ಹಾನಿಗೊಂಡಿದೆ. ಆದರೆ ಈ ಆನೆ ದಾಳಿ ವೇಳೆ ದಂತದ ಸ್ವಲ್ಪ ಭಾಗ ಮುರಿದಿದೆ.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯ ನೀರಾವರಿಗೆ ಕಂಟಕವಾಯ್ತಾ ಭದ್ರಾ ಮೇಲ್ದಂಡೆ ಕಾಲುವೆ ಕಾಮಗಾರಿ?
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮ ಮುದಗನೂರಿನ ಶ್ರೀನಿವಾಸ್ ಮತ್ತು ಮುಖೇಶ್ ಎಂಬ ರೈತರ ಎರಡು ಟ್ರ್ಯಾಕ್ಟರ್ಗಳು ಆನೆ ದಾಳಿಯಿಂದ ಹಾನಿಗೊಳಗಾಗಿವೆ. ಜೊತೆಗೆ ಗಿರಿಜನ ನಿವಾಸಿ ಕೂಸಪ್ಪ ಅವರ ಮನೆ ಮೇಲೆಯೂ ದಾಳಿ ಮಾಡಿದ್ದು, ಹೂವಿನಕುಂಡ ಹಾಗೂ ಸೂರನ್ನು ಧ್ವಂಸಗೊಳಿಸಿವೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿದ್ದು, ಒಂಟಿ ಸಲಗದ ಮುರಿದು ಬಿದ್ದಿ ದಂತದ ಚೂರನ್ನು ವಶಕ್ಕೆ ಪಡೆದಿದ್ದಾರೆ.