ETV Bharat / state

ಯುಪಿಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮೈಸೂರಿನ ಮುಖ್ಯ ಪೇದೆ ಸಾವು - kannada news

ಉತ್ತರಪ್ರದೇಶದ ರಾಯ್ ಬರೇಲಿಯ ಉಂಚ್ ಹಾರ್​ನಲ್ಲಿ ಕರ್ತವ್ಯ ನಿರ್ವಹಿಸಲು ತೆರಳಿದ್ದ ಮೈಸೂರಿನ ಮುಖ್ಯ ಪೇದೆ ಆರ್.ಕೆ.ಪ್ರಕಾಶ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಚುನಾವಣೆ ಕರ್ತವ್ಯ ನಿರತ ಮುಖ್ಯಪೇದೆ ಸಾವು
author img

By

Published : May 4, 2019, 9:49 PM IST

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಪ್ರದೇಶಕ್ಕೆ ತೆರಳಿದ್ದ ಮೈಸೂರಿನ ಮುಖ್ಯ ಪೇದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಚುನಾವಣಾ ಕಾರ್ಯ ನಿಮಿತ್ತವಾಗಿ ಉತ್ತರಪ್ರದೇಶದ ರಾಯ್​ ಬರೇಲಿಯ ಉಂಚ್ ಹಾರ್​ನಲ್ಲಿ ಕರ್ತವ್ಯ ನಿರ್ವಹಿಸಲು ತೆರಳಿದ್ದ ಸಿ.ಐ.ಎಸ್.ಎಫ್. ಮುಖ್ಯ ಪೇದೆ ಆರ್.ಕೆ.ಪ್ರಕಾಶ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮಂಜುನಾಥ ಬಡಾವಣೆ ನಿವಾಸಿಯಾದ ಪ್ರಕಾಶ್ ಆರ್​ಬಿಐನಲ್ಲಿ ಮುಖ್ಯ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಪ್ರದೇಶಕ್ಕೆ ಕಳುಹಿಸಲಾಗಿತ್ತು.

ಪ್ರಕಾಶ್ ಹುಟ್ಟೂರಾದ ಪಿರಿಯಾಪಟ್ಟಣ ತಾಲೂಕಿನ ರಾಮನಾಥತುಂಗದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Intro:ಮುಖ್ಯಪೇದೆ ಸಾವುBody:

ರಾಯ್‍ಬರೇಲಿ ಚುನಾವಣೆ ಕರ್ತವ್ಯದಲ್ಲಿ ಮೈಸೂರಿನ ಮುಖ್ಯಪೇದೆ ಹೃದಯಾಘಾತದಿಂದ ಸಾವು
ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ತವ್ಯ ಮೆರೆಗೆ ಉತ್ತರಪ್ರದೇಶಕ್ಕೆ ತೆರಳಿದ್ದ ಮೈಸೂರಿನ ಮುಖ್ಯಪೇದೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಸಿಐಎಸ್‍ಎಫ್‍ನ ಮುಖ್ಯ ಪೇದೆ ಆರ್.ಕೆ.ಪ್ರಕಾಶ್ (48) ಅವರು ಕರ್ತವ್ಯ ವೇಳೆ ಉತ್ತರಪ್ರದೇಶದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪ್ರಕಾಸ್ನ ಆರ್‍ಬಿಐನಲ್ಲಿ ಸಿಐಎಸ್‍ಎಫ್‍ನ ಮುಖ್ಯ ಪೇದೆಯಾಗಿ  ಕೆಲಸ ಮಾಡುತ್ತಿದ್ದರರು. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಉತ್ತರಪ್ರದೇಶಕ್ಕೆ ಕಳುಹಿಸಲಾಗಿತ್ತು.
ಈ ನಡುವೆ  ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿ ಉಂಚಹಾರ್ ಕರ್ತವ್ಯದಲ್ಲಿದ್ದಾಗ  ಪ್ರಕಾಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.  ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮಂಜುನಾಥ ಬಡಾವಣೆ ನಿವಾಸಿಯಾದ ಪ್ರಕಾಶ್ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಇಂದು ಶನಿವರ ಪ್ರಕಾಶ್ ಮೃತದೇಹ ಮೈಸೂರಿಗೆ ಆಗಮಿಸಲಿದ್ದು, ಪಿರಿಯಾಪಟ್ಟಣ ತಾಲ್ಲೂಕಿನ ರಾಮನಾಥತುಂಗ ಹುಟ್ಟೂರು ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. Conclusion:ಮುಖ್ಯಪೇದೆ ಸಾವು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.