ETV Bharat / state

ಸಿಎಎ ಅಪಾಯದ ಬಗ್ಗೆ ನಾವೂ ಕರಪತ್ರ ಹಂಚ್ತೀವಿ.. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ

author img

By

Published : Jan 6, 2020, 1:57 PM IST

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಯಿಂದ ಎಷ್ಟು ಅಪಾಯವಿದೆ ಎಂದು ಮನೆ ಮನೆಗೆ ತೆರಳಿ ನಾವು ಕರಪತ್ರ ಹಂಚ್ತೀವಿ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

Dr. Yatindra Siddaramaiah Press meet in Mysor
ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ

ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಯಿಂದ ಎಷ್ಟು ಅಪಾಯವಿದೆ ಎಂದು ಮನೆ ಮನೆಗೆ ತೆರಳಿ ನಾವು ಕರಪತ್ರ ಹಂಚ್ತೀವಿ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸಿಎಎ,ಎನ್​ಆರ್​ಸಿ ಹಾಗೂ ಎನ್​ಪಿಆರ್ ಬಗ್ಗೆ ಕೇಂದ್ರ ಸರ್ಕಾರ ಸರಿಯಾದ ಮಾಹಿತಿ ಕೊಡುತ್ತಿಲ್ಲ ಮತ್ತು ಇದರ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದು ಹರಿಹಾಯ್ದರು. ಈ ವೇಳೆ ಪತ್ರಕರ್ತರ ಪ್ರಶ್ನೆಗೆ ಗರಂ ಆದ ಅವರು, ಆದಿವಾಸಿ, ಬಡವರು, ಪ್ರವಾಹದಿಂದ ತತ್ತರಿಸಿರುವ ಜನರು ಹೇಗೆ ದಾಖಲಾತಿ ಒದಗಿಸುತ್ತಾರೆ. ಅಸ್ಸೋಂನಲ್ಲಿ ಎನ್​ಆರ್​ಸಿಯಿಂದ 19 ಲಕ್ಷ ಜನರನ್ನ ಹೊರ ಹಾಕಿದ್ದಾರೆ. ಇದು ಮುಂದಿನ ದಿನಗಳಲ್ಲಿ ದೇಶಕ್ಕೆ ಅನ್ವಯವಾಗಲಿದೆ ಎಂದರು.

ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ

ಸೋಮಶೇಖರ್ ರೆಡ್ಡಿ ಪ್ರಚೋದಾನಾತ್ಮಕ ಭಾಷಣದ ಮೂಲಕ ಅಲ್ಪ ಸಂಖ್ಯಾತರನ್ನು ಕಡೆಗಣಿಸಿದ್ದಾರೆ. ಜೆಎನ್​ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಎನ್ಆರ್​ಸಿ ಹಾಗೂ ಸಿಎಎ ಬಗ್ಗೆ ಬಿಜೆಪಿಯವರು ಕರಪತ್ರ ಹಂಚುತ್ತಿದ್ದಾರೆ. ಅದರಲ್ಲಿ ಎಷ್ಟು ಸುಳ್ಳುಗಳಿವೆ ಎನ್ನುವುದರ ಬಗ್ಗೆ ನಾವು ಕರಪತ್ರ ಹಂಚ್ತೀವಿ, ಇದರ ಬಗ್ಗೆ ಬಿಜೆಪಿ ಮುಖಂಡರು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

Intro:ಡಾ.ಯತೀಂದ್ರ ಸಿದ್ದರಾಮಯ್ಯ

Body:ಮೈಸೂರು:ಸಿಎಎ ಹಾಗೂ ಎನ್ ಆರ್ ಸಿ ಎಷ್ಟು ಅನಾಹುತ ಹಾಗೂ ಅಪಾಯವಿದೆ ಎಂದು ಮನೆ ಮನೆಗೆ ತೆರಳಿ ನಾವು ಕರಪತ್ರ ಹಂಚುತ್ತೀವಿ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎನ್ ಆರ್ ಸಿ, ಸಿಎಎ ಹಾಗೂ ಎನ್ ಪಿಆರ್ ಬಗ್ಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ.ಇದರ ಬಗ್ಗೆ ಚರ್ಚೆ ಮಾಡುತ್ತಿಲ್ಲವೆಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಭಾವನಾತ್ಮಕಕ್ಕೆ ಒಳಗಾದ ಯತೀಂದ್ರ: ಎನ್ ಆರ್ ಸಿ ಹಾಗೂ ಸಿಎಎ ಬಗ್ಗೆ ಪರ್ತಕರ್ತರ ಪ್ರಶ್ನೆಗೆ ಗರಂ ಆದ, ಯತೀಂದ್ರ ಸಿದ್ದರಾಮಯ್ಯ, ಆದಿವಾಸಿ, ಬಡವರು, ಪ್ರವಾಹದಿಂದ ತತ್ತರಿಸಿರುವ ಜನರು ಹೇಗೆ ದಾಖಲಾತಿ ಒದಗಿಸುತ್ತಾರೆ? ಅಸ್ಸಾಂನಲ್ಲಿ ಎನ್ ಆರ್ ಸಿ ಯಿಂದ 19 ಲಕ್ಷ ಜನರನ್ನು ಹೊರ ಹಾಕಿದ್ದಾರೆ.ಇದು ಮುಂದಿನ ದಿನಗಳಲ್ಲಿ ದೇಶಕ್ಕೆ ಅನ್ವಯವಾಗಲಿದೆ ಎಂದರು.
ಸೋಮಶೇಖರ್ ರೆಡ್ಡಿ ಅವರು ಪ್ರಚೋದಾನಾತ್ಮಕ ಭಾಷಣದ ಮೂಲಕ ಅಲ್ಪ ಸಂಖ್ಯಾತರನ್ನು ಕಡೆ ಗಣಿಸಿದ್ದಾರೆ. ಜೆಎನ್ ಯು ವಿದ್ಯಾರ್ಥಿ ಗಲಾಟೆಯನ್ನು ಖಂಡಿಸುತ್ತೀನಿ. ವಿದ್ಯಾರ್ಥಿಗಳಲ್ಲಿ ಧರ್ಮ ಹಾಗೂ ಜಾತಿ ಬಿತ್ತುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಎನ್ ಆರ್ ಸಿ ಹಾಗೂ ಸಿಎಎ ಬಗ್ಗೆ ಕರಪತ್ರ ಹಂಚುತ್ತಿದ್ದಾರೆ.ಅದರಲ್ಲಿ ಎಷ್ಟು ಸುಳ್ಳುಗಳಿವೆ ಎನ್ನುವುದರ ಬಗ್ಗೆ ನಾವು ಕರಪತ್ರ ಹಂಚುತ್ತೀವಿ. ಇದರ ಬಗ್ಗೆ ಬಿಜೆಪಿ ಮುಖಂಡರು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

Conclusion:ಡಾ.ಯತೀಂದ್ರ ಸಿದ್ದರಾಮಯ್ಯ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.