ಮೈಸೂರು : 18 ವರ್ಷದೊಳಗಿನವರು ಪೆಟ್ರೋಲ್ ಬಂಕ್ಗೆ ವಾಹನ ತಂದರೆ ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಡಿಸಿಪಿ ಗೀತಾ ಪ್ರಸನ್ನ ಸೂಚಿಸಿದ್ದಾರೆ.
ಹೀಗಾಗಿ ಇನ್ನು ಮುಂದೆ ಅಪ್ರಾಪ್ತರನ್ನು ಪೆಟ್ರೋಲ್ ಬಂಕ್ಗೆ ಕಳಿಸುವ ಮುನ್ನ ಪೋಷಕರು ಎಚ್ಚರದಿಂದ ಇರಬೇಕಿದೆ. ಅಪ್ರಾಪ್ತರು ಬೈಕ್ ಮತ್ತು ಇತರೆ ವಾಹನವನ್ನು ತೆಗೆದುಕೊಂಡು ಬಂಕ್ಗೆ ಹೋದರೆ ಅಲ್ಲಿನ ಸಿಬ್ಬಂದಿ ಈ ವಿಷಯವನ್ನು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಲಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿಸಿಪಿ ಗೀತಾ ಪ್ರಸನ್ನ, "ಅಪ್ರಾಪ್ತರು ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಾಗ ಬಂಕ್ನಲ್ಲಿ ಇರುವ ಸಿಸಿಟಿವಿಯಲ್ಲಿ ವಾಹನದ ನೊಂದಣಿ ಸಂಖ್ಯೆ, ಅಪ್ರಾಪ್ತನ ಫೋಟೋ ದಾಖಲಾಗುತ್ತದೆ. ಈ ಸಂದರ್ಭದಲ್ಲಿ ಕುಟುಂಬವನ್ನು ಕರೆದು ಬುದ್ದಿವಾದ ಹೇಳುತ್ತೇವೆ. ಆಗಲೂ ಮಾತು ಕೇಳದಿದ್ದರೆ, ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು" ಎಂದರು.