ಮೈಸೂರು: ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿ ವರದಿಯಾಗುತ್ತಿರುವುದಕ್ಕೆ ಜನ ಪ್ಯಾನಿಕ್ ಆಗಬೇಡಿ. ಹಳೆಯ ಡೆತ್ ರಿರ್ಪೋಟ್ ಆಡಿಟ್ ಆಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು. ಈ ಬಗ್ಗೆ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಕಳೆದ 1 ವಾರದಿಂದ ಕೋವಿಡ್ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಈ ಹಿಂದೆ ಕೋವಿಡ್ನಿಂದ ಸಾವನ್ನಪ್ಪಿದ ಜನರ ಡೆತ್ ಆಡಿಟ್ ಆಗಿರಲಿಲ್ಲ.
ಆ ಡೇಟಾಗಳನ್ನು ಈಗ ಸೇರಿಸಲಾಗುತ್ತಿದೆ. ಯಾವುದೇ ಕೋವಿಡ್ ಸಾವುಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ, ಸಾವಿನ ಅಂಕಿ ಅಂಶಗಳನ್ನು ಕಲೆ ಹಾಕುತ್ತಿದ್ದೇವೆ, ಬಳಿಕ ಸ್ಪಷ್ಟವಾಗಿ ತಿಳಿಸುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಮಾತನಾಡಿ, ಜಿಲ್ಲಾಧಿಕಾರಿ ಹೊಸದಾಗಿ ಬಂದಿದ್ದಾರೆ, ಯಾವುದನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಸಾವಿನ ವಿಚಾರದಲ್ಲಿ ಬ್ಲಾಕ್& ಅಂಡ್ ವೈಟ್ ಇಲ್ಲ. ಎಲ್ಲವನ್ನು ನಿಮಗೆ ತಿಳಿಸುತ್ತೇವೆ ಎಂದು ಹೇಳಿ ತರಾತುರಿಯಲ್ಲಿ ಸಭೆಯಿಂದ ಹೊರಟರು.