ಮೈಸೂರು: ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ನಾಲ್ಕೇ ದಿನ ಬಾಕಿ ಇದ್ದು, ಇದಕ್ಕಾಗಿ ಅರಮನೆ ಅಂಗಳದಲ್ಲಿ ಗಜಪಡೆಯಿಂದ ರಿಹರ್ಸಲ್ ನಡೆಸಲಾಯಿತು.
ಜಂಬೂಸವಾರಿ ಮೆರವಣಿಗೆ ದಿನ ಆನೆಗಳಿಗೆ ಸಾಥ್ ನೀಡಲಿರುವ ಸಿಎಆರ್ ಮತ್ತು ಅಶ್ವಾರೋಹಿ ಪೊಲೀಸರಿಂದ ತಾಲೀಮು ನಡೆಸಲಾಯಿತು. ಜಂಬೂಸವಾರಿ ಮೆರವಣಿಗೆ ದಿನ ಅಭಿಮನ್ಯು ಹೆಗಲ ಮೇಲೇರುವ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗುವ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಯಧುವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಮಾಡಲಿದ್ದಾರೆ.
ಪುಷ್ಪಾರ್ಚನೆ ಸಂದರ್ಭ ಗಣ್ಯರಿಗೆ ಹೇಗೆ ಗೌರವ ವಂದನೆ ನೀಡಬೇಕು ಎಂಬುದರ ಬಗ್ಗೆ ಗಜಪಡೆಗೆ ರಿಹರ್ಸಲ್ ಮಾಡಿಸಲಾಯಿತು. ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಅಶ್ವಪಡೆ ಹಾಗೂ ಪೊಲೀಸರಿಗೂ ಶಿಷ್ಟಾಚಾರದ ಮಾಹಿತಿ ನೀಡಲಾಯಿತು. ಇನ್ನೂ ಎರಡು ದಿನಗಳ ಕಾಲ ಇದೇ ರೀತಿ ರಿಹರ್ಸಲ್ ನಡೆಯಲಿದೆ.
ಇದನ್ನೂ ಓದಿ:ಸರಳ ದಸರಾದಲ್ಲೂ ಮೈಸೂರಿನತ್ತ ಪ್ರವಾಸಿಗರು... ಪ್ರವಾಸೋದ್ಯಮಕ್ಕೆ 'ಹಬ್ಬ'