ಮೈಸೂರು: ನಟ ದರ್ಶನ್ ಅವರಿಗೆ ಕಾರ್ ಕ್ರೇಜ್ ಇರುವ ವಿಷಯ ಎಲ್ಲರಿಗೂ ತಿಳಿದಿದೆ. ಇದೀಗ ದರ್ಶನ್ ಅಭಿಮಾನಿಯೊಬ್ಬರು ಹೊಸ ಕಾರ್ ಖರೀದಿ ಮಾಡಿದ್ದು, ತಾವು ಖರೀದಿ ಮಾಡಿದ್ದ ಕಾರಿಗೆ ದರ್ಶನ್ ಬಳಿ ಆಟೋಗ್ರಾಫ್ ಹಾಕಿಸಿಕೊಂಡಿದ್ದಾರೆ.
ದರ್ಶನ್ ಅಭಿಮಾನಿ ಹಿನ್ಕಲ್ ನಿವಾಸಿ ತ್ಯಾಗರಾಜ್ ಅವರು ಇತ್ತೀಚೆಗಷ್ಟೇ ಹೊಸ ಇನೋವಾ ಕ್ರಿಸ್ಟಾ ಕಾರನ್ನು ಖರೀದಿ ಮಾಡಿದ್ದರು. ಜೊತೆಗೆ ದರ್ಶನ್ ಅವರ ಆಟೋಗ್ರಾಫ್ ಹಾಕಿಸಬೇಕೆಂಬ ಆಸೆ ಹೊಂದಿದ್ದರು. ಇದೀಗ ಈ ಕನಸನ್ನು ನಟ ದರ್ಶನ್ ನನಸು ಮಾಡಿದ್ದಾರೆ.

ಹೌದು, ಅಭಿಮಾನಿಯ ಕಾರಿನ ಒಳಗೆ ಆಟೋಗ್ರಾಫ್ ಹಾಕಿದ ದಚ್ಚು, 'DRIVE SAFE ' ಎಂದು ಬರೆದು ಸಂದೇಶವೊಂದನ್ನು ಕೊಟ್ಟಿದ್ದಾರೆ. ದರ್ಶನ್ ಅವರ ಈ ಸರಳತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
