ಮೈಸೂರು: ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಿದ್ದ ಸ್ವಯಂಸೇವಕ ಅನಾರೋಗ್ಯದಿಂದ ಅಕಾಲಿಕ ಮರಣ ಹೊಂದಿದ್ದಾರೆ.
ಸ್ವಯಂಸೇವಕ ಖಲೀಲ್ ಉಲ್ ರೆಹಮಾನ್ (29) ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಇವರು ಲಾಕ್ಡೌನ್ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ರಚಿಸಿದ್ದ ಸ್ವಯಂಸೇವಕರ ತಂಡದಲ್ಲಿ ಕೆಲಸ ಮಾಡಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ 25000ಕ್ಕೂ ಹೆಚ್ಚು ಬಡವರಿಗೆ ಪಡಿತರ ಕಿಟ್ ವಿತರಿಸಿದ್ದು, 500ಕ್ಕೂ ಹೆಚ್ಚು ನಿರ್ಗತಿಕರಿಗೆ ದೇಣಿಗೆ ಸಂಗ್ರಹಿಸಿ ಆಹಾರ ವಿತರಣೆ ಮಾಡಿದ್ದರು. ಇದರಿಂದ ಇಂಡಿಯನ್ ರೆಡ್ ಕ್ರಾಸ್ ಹಾಗೂ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಅತ್ಯುತ್ತಮ ಸ್ವಯಂಸೇವಕ ಎಂದು ಪ್ರಶಸ್ತಿ ನೀಡಲಾಗಿತ್ತು.
ಕಳೆದ 8 ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಚಿಕಿತ್ಸೆ ಪಡೆದರೂ ಈತನಿಗೆ ಶ್ವಾಸಕೋಶದ ಸಮಸ್ಯೆ ಉಲ್ಬಣಿಸಿ ಸಾವನ್ನಪ್ಪಿದ್ದಾರೆ. ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ.