ETV Bharat / state

ಮೋದಿ ರೋಡ್ ಶೋ ಮಾಡಿದ್ದ ಮೈಸೂರಿನ ರಸ್ತೆ ಕಾಂಗ್ರೆಸ್ ಕಾರ್ಯಕರ್ತರಿಂದ ಕ್ಲೀನ್​​​​​​​ - ಮೈಸೂರಿನ ಗನ್‌ ಹೌಸ್ ವೃತ್ತ

ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಮೈಸೂರಿನಲ್ಲಿ ರೋಡ್ ಶೋ ಮಾಡಿದ್ದ ಮಾರ್ಗ ಅಪವಿತ್ರವಾಗಿದೆ ಎಂದು ಕಾಂಗ್ರೆಸ್​ ಕಾರ್ಯಕರ್ತರು ಸಗಣಿ ಗಂಜಲದಿಂದ ಸ್ವಚ್ಛಗೊಳಿಸಿದರು.

congress-workers-cleaned-road-where-modi-does-road-show
ಮೋದಿ ರೋಡ್ ಶೋ ಮಾಡಿದ ರಸ್ತೆ ಅಪವಿತ್ರ, ಕಾಂಗ್ರೆಸ್ ಕಾರ್ಯಕರ್ತರಿಂದ ಕ್ಲೀನ್​​​​​​​
author img

By

Published : May 14, 2023, 10:10 PM IST

ಮೋದಿ ರೋಡ್ ಶೋ ಮಾಡಿದ ರಸ್ತೆ ಅಪವಿತ್ರ, ಕಾಂಗ್ರೆಸ್ ಕಾರ್ಯಕರ್ತರಿಂದ ಕ್ಲೀನ್​​​​​​​

ಮೈಸೂರು: ಕಳೆದ ಎಪ್ರಿಲ್​​ 30ರಂದು ಮೈಸೂರಿನ ಗನ್‌ ಹೌಸ್ ವೃತ್ತದಿಂದ ಹೈವೇ ವೃತ್ತದವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ ಕೆ. ಆರ್ ವೃತ್ತ, ಸಯ್ಯಾಜಿ ರಾವ್ ರಸ್ತೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಸ್ವಚ್ಛಗೊಳಿಸಿದರು.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಮೈಸೂರು ನಗರದಲ್ಲಿ ರೋಡ್ ಶೋ ನಡೆಸಿದ ಮಾರ್ಗ ಅಪವಿತ್ರವಾಗಿದೆ ಎಂದು ಆರೋಪಿಸಿ, ರೋಡ್ ಶೋ ನಡೆಸಿದ ಮಾರ್ಗದ ರಾಜ ಮಾರ್ಗವನ್ನು ಸಗಣಿ, ಗಂಜಲದಿಂದ ಕಾಂಗ್ರೆಸ್ ಕಾರ್ಯಕರ್ತರು ಕ್ಲೀನ್​ ಮಾಡಿದ್ದಾರೆ. ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಮಾಡಿದ್ದ ಪ್ರಧಾನಿ, ನಾಡದೇವಿ ಚಾಮುಂಡೇಶ್ವರಿ ಮೆರವಣಿಗೆ ಸಾಗುವ ದಾರಿಯಲ್ಲಿ ಬಂದು ಅಪವಿತ್ರ ಮಾಡಿದ್ದಾರೆ ಎಂದು ದೂರಿದರು.

ಇದರಿಂದ ಸಾಗಿದ ಮಾರ್ಗವನ್ನು ಶುಚಿಗೊಳಿಸುವ ಮೂಲಕ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರ ವ್ಯಂಗ್ಯವಾಡಿದರು. ರಾಜ ಮಹಾರಾಜರು ಸಾಗಿದ್ದ ಮಾರ್ಗ, ಈಗ ತಾಯಿ ಚಾಮುಂಡೇಶ್ವರಿ ಸಾಗುವ ಮಾರ್ಗ. ಅಂತಹ ಮಾರ್ಗದಲ್ಲಿ ಮೋದಿ ಸಾಗಿದ್ದು, ಅಪಶಕುನವಾಗಿದ್ದರಿಂದ, ಇದರಿಂದಾಗಿಯೇ ಬಿಜೆಪಿ ಸೋತಿದೆ. ಚಾಮುಂಡೇಶ್ವರಿ ಶಾಪದಿಂದ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚಿದೆ ಎಂದು ಕಾರ್ಯಕರ್ತರು ಹೇಳಿದರು.

ದಸರಾದಲ್ಲಿ ಜಂಬೂಸವಾರಿ ಸಾಗುವ ರಾಜ ಮಾರ್ಗವನ್ನು ರೋಡ್ ಶೋ ಮಾಡಿ ಅಪವಿತ್ರಗೊಳಿಸಲಾಗಿದೆ. ಮೈಸೂರು ರಾಜಮನೆತನ ಮತ್ತು ಚಾಮುಂಡೇಶ್ವರಿ ದೇವಿಯ ಭಕ್ತರಾದ ನಮಗೆ ಈ ಘಟನೆಯಿಂದ ಬಹಳ ನೋವಾಗಿದೆ ಹಾಗೂ ಬೇಸರವಾಗಿದೆ ಎಂದು ಶುದ್ಧೀಕರಣ ಕಾರ್ಯದ ನೇತೃತ್ವ ವಹಿಸಿದ್ದ ನಗರದ ವಿದ್ಯಾರಣ್ಯಪುರ ನಿವಾಸಿ ಕಂಸಾಳೆ ರವಿ ಹೇಳಿದರು.

ಕೆ.ಆರ್. ವೃತ್ತದಿಂದ ಆರಂಭವಾದ ಶುದ್ಧೀಕರಣ ಕಾರ್ಯಕ್ಕೆ ಸಯ್ಯಾಜಿ ದೊಡ್ಡ ಆಸ್ಪತ್ರೆ ವೃತ್ತದ ಬಳಿ ಪೊಲೀಸರು ತಡೆ ನೀಡಿದರು. ಘಟನೆ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಮೂವರ ಮೇಲೆ ಸಾರ್ವಜನಿಕವಾಗಿ ಅಶಾಂತಿ ಸೃಷ್ಟಿಸಿದ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ.. ಶಾಸಕರಿಂದ ಮಾಹಿತಿ ಸಂಗ್ರಹ ಆರಂಭಿಸಿದ ಎಐಸಿಸಿ ವೀಕ್ಷಕರು

ಜೆಡಿಎಸ್​ ಮತ್ತು ಬಿಜೆಪಿಯ ಭದ್ರಕೋಟೆ ಎಂದೇ ಗುರುತಿಸಿಕೊಳ್ಳುತ್ತಿದ್ದ ಮೈಸೂರು ಜಿಲ್ಲೆಯನ್ನು ಈ ಬಾರಿ ಕಾಂಗ್ರೆಸ್​ ಭೇದಿಸಿದೆ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಒಂದು ಸ್ಥಾನ ಪಡೆದುಕೊಂಡರೆ, ಜೆಡಿಎಸ್ 3 ಸ್ಥಾನ ಕಳೆದುಕೊಂಡು ಎರಡು ಕ್ಷೇತ್ರಗಳಲ್ಲಿ ಮಾತ್ರ ಜಯಭೇರಿ ಬಾರಿಸಿ ಕಳಪೆ ಪ್ರದರ್ಶನ ತೋರಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕೊಚ್ಚಿ ಹೋಗಿವೆ. ಈ ಅಲೆ ಮೈಸೂರು ಜಿಲ್ಲೆಗೂ ಅಪ್ಪಳಿಸಿದೆ. ಕಳೆದ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ಕಾಂಗ್ರೆಸ್, ಈ ಬಾರಿ 11 ಸ್ಥಾನಗಳ ಪೈಕಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ ಎರಡು ಹಾಗೂ ಬಿಜೆಪಿ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿವೆ.

ಇದನ್ನೂ ಓದಿ : ಖಾಸಗಿ ಬಸ್​ ಮುಖಾಮುಖಿ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಬಿ ವೈ ವಿಜಯೇಂದ್ರ ಸಾಂತ್ವನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.