ಮೈಸೂರು: ಕೊರೊನಾ ಸೋಂಕಿತನಾಗಿರುವ ಪಾರ್ಶ್ವವಾಯು ಪೀಡಿತನೊಬ್ಬ ಊಟವಿಲ್ಲದೇ ನರಳಾಡಿದ ಘಟನೆ ಟ್ರಾಮಾ ಕೇರ್ ಸೆಂಟರ್ನಲ್ಲಿ ನಡೆದಿದೆ.
ಹೆಚ್.ಡಿ.ಕೋಟೆ ತಾಲೂಕಿನ ಚಿಕ್ಕಬರಗಿ ಗ್ರಾಮದ ಪ್ರಭು ಸ್ವಾಮಿ ಅವರು, ಕೆ.ಆರ್.ಎಸ್.ರಸ್ತೆಯಲ್ಲಿರುವ ಪಿಕೆಟಿಬಿ ಟ್ರಾಮಾ ಕೇರ್ ಸೆಂಟರ್ನಲ್ಲಿ ಕೊರೊನಾ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಮಗಳಿಗೆ ಪೋನ್ ಮಾಡಿದ ಪ್ರಭುಸ್ವಾಮಿ, ಪಾರ್ಶ್ವವಾಯು ಪಿಡಿತನಾಗಿರುವುದರಿಂದ ಸ್ವತಃ ಊಟ ಮಾಡಲು ಆಗದ ಸ್ಥಿತಿ ಇರುವುದರಿಂದ ಆಸ್ಪತ್ರೆ ಸಿಬ್ಬಂದಿ ಊಟ ಮಾಡಿದ್ರೆ ಮಾಡು, ಬಿಟ್ರೆ ಬಿಡು ಎನ್ನುತ್ತಾರೆ. ಆಕ್ಸಿಜನ್ ಕೂಡ ಕೊಟ್ಟಿಲ್ಲ ಅಂತಾ ಮಗಳಿಗೆ ಕರೆ ಮಾಡಿ ಹೇಳಿದ ಆಡಿಯೋ ವೈರಲ್ ಆಗಿದೆ.
ಓದಿ: ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಆಹಾರ ವಿತರಣೆಗೆ ನಿರ್ಧಾರ: ಎಂಟಿಬಿ ನಾಗರಾಜ್