ಮೈಸೂರು: ಆಸ್ಪತ್ರೆಯ ಹೊರಗೆ ಮಹಿಳೆಯ ಹೆರಿಗೆ ಪ್ರಕರಣ ಜನಪ್ರತಿನಿಧಿಗಳು ತಲೆತಗ್ಗಿಸುವ ವಿಚಾರ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ, ವಿಜಯಪುರದ ಸರ್ಕಾರಿ ಆಸ್ಪತ್ರೆಯ ಹೊರಗೆ ಬಡ ಮಹಿಳೆಯ ಹೆರಿಗೆಯಾದ ಘಟನೆ ವ್ಯವಸ್ಥೆಗಿಂತ ಜನಪ್ರತಿನಿಧಿಗಳು ತಲೆ ತಗ್ಗಿಸುವಂತಾಗಿದ್ದಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದರು.
ಇನ್ನೂ ಮಹದಾಯಿ ಹೋರಾಟಗಾರರು ಬೀದಿಯಲ್ಲಿ ಮಲಗಿದ್ದು ಅವರಿಗೆ ಸಹಾಯ ಮಾಡಲು ನಾವು ಸಿದ್ಧ ಎಂದು ಕುಮಾರಸ್ವಾಮಿ ಭರವಸೆ ಕೊಟ್ಟರು.
ಬಸವರಾಜ್ ಹೊರಟ್ಟಿ ಹೇಳಿಕೆಗೆ ಗರಂ ಆದ ಹೆಚ್ಡಿಕೆ, ಸರ್ಕಾರಕ್ಕೆ ಹೊರಟ್ಟಿಯವರು ಎಷ್ಟೆಷ್ಟು ಪತ್ರ ಬರೆದಿದ್ದಾರೆ ಎಂಬುದು ಗೊತ್ತು. ಈ ಹಿಂದೆ ನಾನೇ ಅವರನ್ನು ಮಂತ್ರಿ ಮಾಡಿದ್ದೆ ಎಂದರು.
ಯಡಿಯೂರಪ್ಪ ನಿನ್ನೆ ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಕರ್ನಾಟಕದಿಂದ ನೀರು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದು ಎಷ್ಟು ಸರಿ? ನಾವು ಬರಗಾಲದಲ್ಲಿದ್ದಾಗ ಮಹಾರಾಷ್ಟ್ರದವರು ನೀರು ಕೊಟ್ಟಿದ್ರಾ? ರಾಜಕೀಯಕ್ಕಾಗಿ ರಾಜ್ಯದ ಹಿತ ಬಲಿ ಕೊಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.
ಶಾಸಕ ಸಾ.ರಾ.ಮಹೇಶ್ ಹಾಗೂ ಅನರ್ಹ ಶಾಸಕ ಹೆಚ್ ವಿಶ್ವನಾಥ್ ನಡುವೆ ಆಣೆ ಪ್ರಮಾಣದ ಬಗ್ಗೆ ಸಲಹೆ ನೀಡದಿರುವುದೇ ಒಳ್ಳೆಯದು. ಈ ಬಗ್ಗೆ ಸಾ.ರಾ.ಮಹೇಶ್‌ಗೆ ನಾನೇ ಮಾತನಾಡಬೇಡಿ ಎಂದು ಸಲಹೆ ನೀಡಿದ್ದೇನೆ ಎಂದ್ರು.
ಉಪಚುನಾವಣೆಯಲ್ಲಿ ನಾನು ಸೋಲು ಗೆಲುವನ್ನು ಸಮಾನವಾಗಿ ನೋಡುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡುವ ಕಡೆ ಒತ್ತು ನೀಡುತ್ತೇನೆ ಎಂದು ಅವರು ಇದೇ ವೇಳೆ ತಿಳಿಸಿದ್ರು.