ETV Bharat / state

ಸಿಎಂರಿಂದ ನಾಳೆ ನೂತನ ಪೊಲೀಸ್ ಆಯುಕ್ತರ ಕಚೇರಿ ಉದ್ಘಾಟನೆ - ಮೈಸೂರು ಸುದ್ದಿ

ನಜರ್​ಬಾದ್​ನಲ್ಲಿ​ ನಿರ್ಮಿಸಿರುವ ನೂತನ ನಗರ ಪೊಲೀಸ್ ಆಯುಕ್ತರ ಕಚೇರಿಯನ್ನ ಸಿಎಂ ನಾಳೆ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಭಾಗಿಯಾಗಲಿದ್ದಾರೆ.

new Police Commissioner's Office
ನೂತನ ಪೊಲೀಸ್ ಆಯುಕ್ತರ ಕಚೇರಿ
author img

By

Published : Nov 23, 2020, 4:36 PM IST

ಮೈಸೂರು: ಅರಮನೆ ಶೈಲಿಯಲ್ಲಿರುವ ನೂತನ ಪೊಲೀಸ್ ಆಯುಕ್ತರ ಕಚೇರಿಯನ್ನು ನಾಳೆ ಸಂಜೆ ಸಿಎಂ ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ.

ನಾಳೆಯಿಂದ 2 ದಿನಗಳ ಕಾಲ ಮೈಸೂರು ಜಿಲ್ಲೆಯ ಪ್ರವಾಸ ಕೈಗೊಳ್ಳಲಿರುವ ಸಿಎಂ‌ ಯಡಿಯೂರಪ್ಪ, ನಾಳೆ ಸಂಜೆ ವಿಮಾನದ ಮೂಲಕ ಮೈಸೂರಿಗೆ ಆಗಮಿಸಿ ಸಂಜೆ ನಜರ್​ಬಾದ್​ನ ಬ್ಯಾಂಡ್ ಹೌಸ್ ಮುಂಭಾಗದಲ್ಲಿ ನಿರ್ಮಿಸಲಾಗಿರುವ ನೂತನ ನಗರ ಪೊಲೀಸ್ ಆಯುಕ್ತರ ಕಚೇರಿ ಉದ್ಘಾಟನೆ ಮಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಭಾಗವಹಿಸಲಿದ್ದು, ಸಂಜೆ ಸಂಬಂಧಿಕರ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಬೆಳಗ್ಗೆ ಲಲಿತ್​ಮಹಲ್​ನಲ್ಲಿ ನಡೆಯುವ ಮದುವೆ ಕಾರ್ಯಕ್ರಮದಲ್ಲೂ ಸಹ ಭಾಗವಹಿಸಿ ನಂತರ ಸುತ್ತೂರು ಹಾಗೂ ಮುಡುಕುತೊರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹದೇಶ್ವರ ಬೆಟ್ಟಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ನೂತನ ಆಯುಕ್ತರ ಕಚೇರಿಯ ವಿವರಗಳು:

ನಗರದ ನಜರ್​ಬಾದ್ ಬ್ಯಾಂಡ್​ಹೌಸ್​ನ ಮುಂಭಾಗದಲ್ಲಿ ನಿರ್ಮಾಣವಾಗಿರುವ ನೂತನ ಪೊಲೀಸ್ ಆಯುಕ್ತರ ಕಚೇರಿ ಅರಮನೆ ಶೈಲಿಯಲ್ಲಿದ್ದು, ಈ ಕಟ್ಟಡವನ್ನು 12/06/2014 ರಲ್ಲಿ ನಿರ್ಮಾಣಕ್ಕೆ ಅಡಿಗಲ್ಲು ಇಡಲಾಗಿತ್ತು. ಇದಕ್ಕೆ 19.36 ಕೋಟಿ ರೂ. ವೆಚ್ಚದಲ್ಲಿ 3 ಅಂತಸ್ತಿನ 4268.42 ಚದರ ಮೀಟರ್ ಅಳತೆಯಲ್ಲಿ ನಿರ್ಮಾಣ ಮಾಡಲಾಗಿದ್ದು, ಮೈಸೂರು ಮಹಾನಗರ ಪಾಲಿಕೆಯು 5/9/2020 ರಲ್ಲಿ ಕಟ್ಟಡ ಪೂರ್ಣಗೊಂಡಿರುವ ಪ್ರಮಾಣ ಪತ್ರವನ್ನು ನೀಡಿದೆ. ಈ ನೂತನ ಪೊಲೀಸ್ ಆಯುಕ್ತರ ಕಚೇರಿ ಜೊತೆಗೆ ಪೊಲೀಸರ ಕ್ವಾಟ್ರಸ್ ಸಹ ನಾಳೆ ಸಿಎಂ ಉದ್ಘಾಟನೆ ನೆರವೇರಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.