ಮೈಸೂರು: ಚಿಣ್ಣರ ಮೇಳದಲ್ಲಿ ಪುಟಾಣಿಗಳು ಮೈ ಮರೆತು ಸಾಮೂಹಿಕವಾಗಿ ಕುಣಿದು ಕುಪ್ಪಳಿಸುತ್ತಿದ್ದರೆ, ಪೋಷಕರ ಮುಖದಲ್ಲಿ ಬಾಲ್ಯದ ನೆನಪುಗಳು ಜಾರಿ ಬಂದವು.
ಹೌದು, ರಂಗಾಯಣದ ವನರಂಗದಲ್ಲಿ ಇಂದು ನಡೆದ ಮಕ್ಕಳ ಸಾಮೂಹಿಕ ನೃತ್ಯದಲ್ಲಿ 400ಕ್ಕೂ ಹೆಚ್ಚು ಮಕ್ಕಳು ಸ್ಟೆಪ್ ಹಾಕಿ, ನೋಡುತ್ತಿದ್ದವರು ಕೂಡ ಮೈ ಮರೆತು ಕುಣಿಯುವಂತೆ ಮಾಡಿದರು.
ಮಕ್ಕಳ ಮುಗ್ಧತೆ, ಆಟ-ನಲಿದಾಟ, ಸಂತಸದ ಕ್ಷಣಗಳು ರಂಗಾಯಣದ ಆವರಣದಲ್ಲಿ ಹಕ್ಕಿಗಳ ಚಿಲಿಪಿಲಿ ಕೂಗಿನಂತೆ ಭಾಸವಾಗುತ್ತಿತ್ತು. ಒಂದೇ ಗೂಡಿನ ಹಕ್ಕಿಗಳು ಸಂಭ್ರಮದಲ್ಲಿ ತೇಲುವಂತಹ ದೃಶ್ಯದಂತೆ ಕಾಣುತ್ತಿತ್ತು.