ETV Bharat / state

ಬಸವಣ್ಣನವರ ಆಶಯದಂತೆ ಸಮಾಜ ನಿರ್ಮಾಣ ಆಗಬೇಕಿದೆ : ಸಿಎಂ ಬಸವರಾಜ ಬೊಮ್ಮಾಯಿ - ಸುತ್ತೂರು ಶಾಖಾ ಮಠದಲ್ಲಿ ರಜತ ಮಹೋತ್ಸವ

ಚಾಮುಂಡಿ ಬೆಟ್ಟದ ಸುತ್ತೂರು ಶಾಖಾ ಮಠದಲ್ಲಿ ಬಸವ ಬಳಗ ಒಕ್ಕೂಟದ 25ನೇ ವರ್ಷದ ರಜತ ಮಹೋತ್ಸವ ನಡೆಯಿತು.

Silver Jubilee of Basava Balaga
ಬಸವ ಬಳಗದ ರಜತ ಮಹೋತ್ಸವ
author img

By

Published : Dec 10, 2022, 7:46 PM IST

ಮೈಸೂರು: ಬಸವಣ್ಣನವರ ಆಶಯದಂತೆ, ಕಾಯಕ ಸಮಾಜದ ನಿರ್ಮಾಣ ಆಗಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ-ಲಿಂಗಾಯಿತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ 25ನೇ ವರ್ಷದ ರಜತ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಅಸಮಾನತೆ, ಲಿಂಗಭೇದ ವಿರುದ್ಧ ಹೋರಾಟ ಮಾಡಿದವರು ಬಸವಣ್ಣನವರು. ಯಾವುದರ ವಿರುದ್ಧ ಹೋರಾಟ ಮಾಡಿ ಸಾಮಾಜಿಕ ಕ್ರಾಂತಿಯ ಮೂಲಕ ಸಮಾಜದ ಕಣ್ಣು ತೆರೆಸಿದ್ದಾರೆ ಎಂದು ತಿಳಿಸಿದರು.

ಬಸವಣ್ಣನ ಚಿಂತನೆ ಮಾಡಿದರೆ ಸಮಾನತೆ: ಬಸವಣ್ಣ ಆದರ್ಶ ಇಷ್ಟು ವರ್ಷವಾದರೂ ಅನುಷ್ಠಾನ, ಚಿಂತನೆ ಬಿತ್ತಬೇಕಿತ್ತು. ಬಸವಾದಿ ಶರಣರು, ಬಸವಣ್ಣ ನಂಬಿರುವ ಸಮಾಜವನ್ನು ನಿರ್ಮಾಣ ಮಾಡುವ ಸಂಕಲ್ಪ ಮಾಡಬೇಕಿದೆ. ಪ್ರತಿನಿತ್ಯ ಪ್ರತಿಯೊಬ್ಬರು ಆಚಾರ ವಿಚಾರದಲ್ಲಿ ಬಸವಣ್ಣನ ಚಿಂತನೆ ಮಾಡಿದರೆ ಸಮಾನತೆ ತಾನಾಗಿಯೇ ಬರಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ನಿನ್ನ ಕಾಯಕವನ್ನು ಮಾಡಿದರೆ ಪೂಜೆಯಷ್ಟೇ ಸರ್ವಶ್ರೇಷ್ಠ. ಕಾಯಕದ ಜತೆಗೆ ದಾಸೋಹ ಕಲ್ಪನೆ ಅನುಷ್ಠಾನಕ್ಕೆ ಚಿಂತನೆ ಕೊಟ್ಟಾಗಿದೆ, ಒಂದು ಸಂಸ್ಕಾರ ಬೆಳೆಯಲಿದೆ. ಕಾಯಕವನ್ನು ಇತರರೊಂದಿಗೆ ಹಂಚಿಕೊಂಡಾಗ ಮಾತ್ರ ಅದು ಕಾಯಕ ಆಗಲಿದೆ ಎಂದರು.

ವಚನ ಸಾಹಿತ್ಯ ಶ್ರೀಮಂತ: ವಚನಕಾರರು ನಮ್ಮ ಸಮಾಜವನ್ನು ಬಹಳ ಶ್ರೀಮಂತಗೊಳಿಸಿದ್ದಾರೆ. ವಚನ ಸಾಹಿತ್ಯ, ದಾಸ ಸಾಹಿತ್ಯ, ಮೌಲಿಕ ಸಾಹಿತ್ಯವನ್ನು ನೀಡಿದ್ದಾರೆ. ಮಹಿಳೆಯರಿಗೆ ಸಮಾನತೆ ಕೊಟ್ಟರೆ ಏನಾಗಲಿದೆ ಎಂಬುದಕ್ಕೆ ಅಕ್ಕ ಮಹಾದೇವಿ ಉದಾಹರಣೆ ಆಗಿದ್ದಾರೆ. ಬದುಕಿಗಾಗಿ ಹೋರಾಟ ಮಾಡಿದವರು ಕೆಳದಿ ಚೆನ್ನಮ್ಮ ಆಗಿದ್ದಾರೆ. ಲಿಂಗ ಪೂಜೆ ಕಲ್ಪನೆ ನೇರವಾಗಿ ದೇವರೊಟ್ಟಿಗೆ ಸಂವಹನ ನಡೆಸುವ ಜಗತ್ತಿನ ದೊಡ್ಡ ಪರಂಪರೆಯಾಗಿದೆ. ಈ ಪರಂಪರೆಯನ್ನು ಯಾವ ರೀತಿ ಕೊಂಡೊಯ್ಯಬೇಕಾಗಿದೆ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಿದೆ ಎಂದು ಹೇಳಿದರು.

ಇದನ್ನೂಓದಿ:ಕೌಶಲ್ಯ ಹಾಗೂ ಮಾನವ ಬಂಡವಾಳದಲ್ಲಿ ರಾಜ್ಯ ನಂಬರ್ ಒನ್ ಸ್ಥಾನಕ್ಕೆ ಏರಬೇಕು: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.