ಮೈಸೂರು: ಮೈಸೂರು ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಉಲ್ಬಣವಾಗುತ್ತಿದೆ. ಹೀಗಾಗಿ ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತ ಕ್ರಮವನ್ನು ಕೈಗೊಂಡಿದ್ದಾರೆ.
ರೋಗವನ್ನು ಹತೋಟಿಗೆ ತರಲು ಮೈಸೂರು ಜಿಲ್ಲೆಯಾದ್ಯಂತ ಅಷ್ಟೇ ಅಲ್ಲದೆ ನೆರೆ ರಾಜ್ಯಗಳಿಂದ ಒಳಗೆ ಮತ್ತು ಹೊರಗೆ ಜಾನುವಾರು ಸಾಗಾಣಿಕೆ, ಸಂತೆಯನ್ನು ತಾತ್ಕಾಲಿಕವಾಗಿ ಡಿ.11 ರಿಂದ 2023 ರ ಜನವರಿ 10 ರವರೆಗೆ ನಿಷೇಧಿಸಲಾಗಿದೆ ಎಂದು ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ. ಕೆ.ವಿ.ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರು: ಕಾದಂಬರಿಕಾರ್ತಿ ತ್ರಿವೇಣಿ ಬದುಕಿದ್ದ ಹಳೆಮನೆಗೆ ಈಗ ಬೆಳ್ಳಿಮೋಡ ಮ್ಯೂಸಿಯಂ ಸ್ವರೂಪ..!