ಮೈಸೂರು: ಕುರಿಗಾಹಿಯನ್ನು ಬಲಿ ಪಡೆದಿದ್ದ ಹುಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರು ವಲಯದ ನೆರಳಕುಪ್ಪೆ ಬಿ. ಹಾಡಿಯ ಜಗದೀಶ್ ಎಂಬುವವರನ್ನು ಬಲಿ ಪಡೆದಿದ್ದ ಹುಲಿ ಮಂಗಳವಾರ ರಾತ್ರಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ನಿನ್ನೆ ಕುರಿ ಮೇಯಿಸಲು ಹೋಗಿದ್ದ ಜಗದೀಶ್ ಎಂಬುವವರನ್ನು ಹಂದಿಹಳ್ಳ ಎಂಬಲ್ಲಿ ಹುಲಿ ತಿಂದು ಹಾಕಿದ್ದು , ಆ ಜಾಗದಲ್ಲೆ ಅರಣ್ಯ ಇಲಾಖೆ ಅಧಿಕಾರಿಗಳು 2 ಬೋನ್ ಇಟ್ಟಿದ್ದರು. ಬೋನಿಗೆ ಹುಲಿ ಬಿದ್ದಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಹುಲಿಯನ್ನು ಇಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮೈಸೂರು ಮೃಗಾಲಯದ ಪುನರ್ ವಸತಿ ಕೇಂದ್ರಕ್ಕೆ ತಂದು ಆರೋಗ್ಯ ಪರೀಕ್ಷೆ ನಡೆಸಲಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.