ETV Bharat / state

ವಿಜಯಾನಂದ ಕಾಶಪ್ಪನವರ ಬಾಯಿ ಮುಚ್ಚಿಸಲು ನಾನು ಯಾರು: ಬಿ.ವೈ. ವಿಜಯೇಂದ್ರ ಪ್ರಶ್ನೆ - ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ

ಬಾರ್‌ ನಲ್ಲಿ ನಡೆದ ಗಲಾಟೆಯನ್ನು ನಾನು ನೆನಪು ಮಾಡಿದೆ ಅಷ್ಟೇ. ನಾನು ವೈಯಕ್ತಿಕವಾಗಿ ಮಾತನಾಡಿಲ್ಲ, ಟೀಕೆ ಮಾಡಿಲ್ಲ. ದಿನ ಬೆಳಗಾದರೆ ಅವರಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದು ನನ್ನ ಕೆಲಸವಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿದರು.

BY Vijayendra Statement About Vijayananda Kashappanavar in Mysore
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ
author img

By

Published : Feb 14, 2021, 11:26 AM IST

Updated : Feb 14, 2021, 11:42 AM IST

ಮೈಸೂರು: ವಿಜಯಾನಂದ ಕಾಶಪ್ಪನವರ್ ಬಾಯಿ ಮುಚ್ಚಿಸಲು ನಾನು ಯಾರು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ

ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಮ್ಮೆ ಶಾಸಕರಾದವರು ಸಿಎಂ ಯಡಿಯೂರಪ್ಪ ಅವರು ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಿ ಅಂತ ಹೇಳಿದ್ದಷ್ಟೇ. ಮಾಧ್ಯಮದ ಮುಂದೆ ಬಂದು ಯಾರಾದರೂ ಏನಾದರೂ ಮಾತನಾಡಲಿ, ಅವರ ಬಾಯಿ ಮುಚ್ಚಿಸಲು ನಾನು ಯಾರು? ನಾನು ಇನ್ನು ಮುಂದೆ ಅವರ ವಿಚಾರಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಓದಿ : ಕಾಶಪ್ಪನವರು ಅಂದ್ರೆ ಯಾರು, ಬಾರಲ್ಲಿ ಗಲಾಟೆ ಮಾಡಿಕೊಂಡಿದ್ರಲ್ಲ ಅವರಾ..?

ಬಾರ್‌ ನಲ್ಲಿ ನಡೆದ ಗಲಾಟೆಯನ್ನು ನಾನು ನೆನಪು ಮಾಡಿದೆ ಅಷ್ಟೇ. ನಾನು ವೈಯಕ್ತಿಕವಾಗಿ ಮಾತನಾಡಿಲ್ಲ, ಟೀಕೆ ಮಾಡಿಲ್ಲ. ದಿನ ಬೆಳಗಾದರೆ ಅವರಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದು ನನ್ನ ಕೆಲಸವಲ್ಲ. ನಾನು ರಾಜ್ಯದ ಜನರ ಹೃದಯದಲ್ಲಿ ಇರಲು ಕೆಲಸ ಮಾಡುತ್ತಿದ್ದೇನೆ. ನನ್ನ ಬದುಕು ತೆರೆದ ಪುಸ್ತಕ, ಯಾರು ಬೇಕಾದರೂ ನೋಡಬಹುದು‌ ಎಂದು ತಿಳಿಸಿದರು.

Last Updated : Feb 14, 2021, 11:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.