ಮೈಸೂರು: ನಾಡಹಬ್ಬ ಮೈಸೂರು ದಸರಾ-2020 ಕಾರ್ಯಕಾರಿ ಸಭೆ ಅರಮನೆ ಆವರಣದಲ್ಲಿರುವ ಆಡಳಿತ ಕಚೇರಿಯಲ್ಲಿ ಆರಂಭವಾಗಿದೆ.
ಈ ಬಾರಿ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಲು ತೀರ್ಮಾನ ಮಾಡಲಾಗಿದ್ದು , ಈ ಹಿನ್ನಲೆಯಲ್ಲಿ ಇಂದು ಅರಮನೆ ಆವರಣದಲ್ಲಿರುವ ಅರಮನೆ ಆಡಳಿತ ಮಂಡಳಿಯ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ನಡೆಯುತ್ತಿದೆ.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ಸಂಸದರು, ಶಾಸಕರು, ಮೇಯರ್ ಹಾಗೂ ಪೋಲಿಸ್ ಕಮಿಷನರ್ ಭಾಗಿಯಾಗಿದ್ದಾರೆ. ಈ ಸಭೆಯಲ್ಲಿ ಸರಳ ದಸರಾದ ರೂಪುರೇಷೆಗಳ ಚರ್ಚೆ, ದಸರಾ ಉದ್ಘಾಟಕರು, ಗಜಪಯಣ ಹಾಗೂ ಸರಳ ಜಂಬೂಸವಾರಿಯ ರೂಪುರೇಷೆಗಳು ಅಂತಿಮವಾಗಲಿದೆ.