ETV Bharat / state

ಯಾವುದೇ ಶಾಲು ಧರಿಸಿ ಬಂದರೂ ಅವರಿಗೆ ತರಗತಿ ಇಲ್ಲ: ಎಚ್ಚರಿಕೆ ನೀಡಿದ ಶಿಕ್ಷಣ ಸಚಿವ

ವಿದ್ಯಾರ್ಥಿನಿಯರನ್ನ ರಸ್ತೆಯಲ್ಲಿ ನಿಲ್ಲಿಸಲು ಇದು ಪಾಕಿಸ್ತಾನ ಅಲ್ಲ. ಅವರು ನಮ್ಮ ಮಕ್ಕಳು, ಮುಗ್ಧತೆ ಇರುವ ಮಕ್ಕಳು. ಅವರನ್ನ ಕೆಲವು ರಾಜಕಾರಣಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ‌. ಮುಗ್ಧ ಮಕ್ಕಳಿಗೆ ಶಾಲೆ ಒಳಗೆ ಕೂರಿಸಿ ಬುದ್ದಿ ಹೇಳುತ್ತೇವೆ‌. ಇದು ಧರ್ಮ ಶಿಕ್ಷಣವಲ್ಲ ಹಿಜಾಬ್ ಧರಿಸಿ ಬರುವ ಮಕ್ಕಳು ಅರ್ಥ ಮಾಡಿಕೊಳ್ಳಬೇಕು ಎಂದು ಬಿ.ಸಿ. ನಾಗೇಶ್ ಹೇಳಿದ್ದಾರೆ.

ಯಾವುದೇ ಶಾಲು ಧರಿಸಿ ಬಂದರೂ ಅವರಿಗೆ ತರಗತಿ ಇಲ್ಲ ಎಂದ ಶಿಕ್ಷಣ ಸಚಿವ

author img

By

Published : Feb 7, 2022, 1:40 PM IST

Updated : Feb 7, 2022, 2:31 PM IST

ಮೈಸೂರು: ಹಿಜಾಬ್, ಕೇಸರಿ ಶಾಲು, ಹಸಿರು ಶಾಲು ಯಾವುದನ್ನು ಧರಿಸಿ ಬಂದರು ಅವರಿಗೆ ತರಗತಿ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿಕೆ ನೀಡಿದ್ದಾರೆ. ಇಂದು ಖಾಸಗಿ ಕಾರ್ಯಕ್ರಮಕ್ಕೆ ಭಾಗವಹಿಸಲು ಮೈಸೂರಿಗೆ ಆಗಮಿಸಿದ್ದ ವೇಳೆ ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ಬಿ.ಸಿ‌ ನಾಗೇಶ್, ಕುಂದಾಪುರದಲ್ಲಿ ಇಂದು ಹಿಜಾಬ್ ಧರಿಸಿ ಶಾಲೆಗೆ ಬಂದ ಹೆಣ್ಣು ಮಕ್ಕಳನ್ನ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದೆ‌.

ಅವರಿಗೆ ಯಾವ ಕ್ಲಾಸ್​​ಗಳು ನಡೆಯುವುದಿಲ್ಲ. ಅವರು ಬೀದಿಯಲ್ಲಿ ನಿಲ್ಲುವುದು ಬೇಡ ಎಂದು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದೆ‌. ಅದೇ ರೀತಿ ಕೇಸರಿ ಶಾಲು, ಹಸಿರು ಶಾಲು ಹಾಕಿಕೊಂಡು ಬಂದರೆ ಅವರಿಗೂ ತರಗತಿ ಇಲ್ಲ ಎಂದರು‌.

ಇದನ್ನೂ ಓದಿ: ಮೈಸೂರು: ತಿಂಡಿ ತಿನ್ನಲು ಬಂದ ವಿದ್ಯಾರ್ಥಿ ಹೋಟೆಲ್​ನಲ್ಲೇ ಹೃದಯಾಘಾತದಿಂದ ಸಾವು! ವಿಡಿಯೋ

ವಿದ್ಯಾರ್ಥಿನಿಯರನ್ನ ರಸ್ತೆಯಲ್ಲಿ ನಿಲ್ಲಿಸಲು ಇದು ಪಾಕಿಸ್ತಾನ ಅಲ್ಲ. ಅವರು ನಮ್ಮ ಮಕ್ಕಳು, ಮುಗ್ಧತೆ ಇರುವ ಮಕ್ಕಳು. ಅವರನ್ನ ಕೆಲವು ರಾಜಕಾರಣಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ‌. ಮುಗ್ಧ ಮಕ್ಕಳಿಗೆ ಶಾಲೆ ಒಳಗೆ ಕೂರಿಸಿ ಬುದ್ದಿ ಹೇಳುತ್ತೇವೆ‌. ಇದು ಧರ್ಮ ಶಿಕ್ಷಣವಲ್ಲ ಹಿಜಾಬ್ ಧರಿಸಿ ಬರುವ ಮಕ್ಕಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಯಾವುದೇ ಶಾಲು ಧರಿಸಿ ಬಂದರೂ ಅವರಿಗೆ ತರಗತಿ ಇಲ್ಲ ಎಂದ ಶಿಕ್ಷಣ ಸಚಿವ

ನಾಳೆ ನ್ಯಾಯಾಲಯದ ಆದೇಶವನ್ನು ನಿರೀಕ್ಷೆ ಮಾಡುತ್ತಿದ್ದೇವೆ. ಅದರ ಆಧಾರದ ಮೇಲೆ ಶಿಕ್ಷಣ ಇಲಾಖೆಯಿಂದ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ನಿಮಗೆ ಪಾಠ ಬೇಕಾದರೆ ಸಮವಸ್ತ್ರ ಧರಿಸಿಯೇ ಶಾಲೆಗೆ ಬರಬೇಕು. ಶಾಲೆಯ ಆವರಣದ ಗೇಟ್ ಹೊರಗೆ ಹಿಜಾಬ್ ಧರಿಸಿ ಬನ್ನಿ ಅದರಲ್ಲಿ ನಮ್ಮ ತಕರಾರು ಇಲ್ಲ.

ಆದರೆ, ಶಾಲೆ ಒಳಗೆ ಸಮವಸ್ತ್ರ ಧರಿಸಿಯೇ ಬರಬೇಕು ಎಂದ ಸಚಿವರು. ನಿಮಗೆ ಮಸೀದಿ ಒಳಗೆ ಪ್ರವೇಶವನ್ನು ನೀಡುವುದಿಲ್ಲ. ಅದರ ವಿರುದ್ಧ ಹೋರಾಟ ಮಾಡಿ, ನಿಮ್ಮ ಹಕ್ಕುಗಳಿಗಾಗಿ ಅಲ್ಲಿ ಧ್ವನಿ ಎತ್ತಿ. ಈ ಶಿಕ್ಷಣ ವ್ಯವಸ್ಥೆಯೊಳಗಡೆ ಹೋರಾಟ ಮಾಡಬೇಡಿ‌. ಕೋಲಾರದ ಶಾಲೆಯಲ್ಲಿ ನಮಾಜ್ ಸಹ ಮಾಡಿದ್ದಾರೆ. ಇದಕ್ಕೆಲ್ಲ ಮತ್ತೊಮ್ಮೆ ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದರು.

Last Updated : Feb 7, 2022, 2:31 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.