ಮೈಸೂರು: ಒಂದು ತಟ್ಟೆಯಲ್ಲಿ ಊಟ ಮಾಡುವ ಪರಿಸ್ಥಿತಿ ಸದ್ಯಕ್ಕಿಲ್ಲ. ಆದರೆ ಸಹಪಂಕ್ತಿಯಲ್ಲಿ ಭೋಜನ ಮಾಡುತ್ತೇವೆ ಎಂದು ರೈತ ಮುಖಂಡರ ನಡುವಿನ ಒಡಕಿನ ಬಗ್ಗೆ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಪ್ರತಿಕ್ರಿಯಿಸಿದರು.
ಕೋಡಿಹಳ್ಳಿ ಚಂದ್ರಶೇಖರ್ ಅವರೂ ಸಹ ಸಂಯುಕ್ತ ಕರ್ನಾಟಕ ರೈತ ಸಂಘದ ಸದಸ್ಯರು. ಅವರು ಸಹ ನಮಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ರೈತ ಸಂಘದಲ್ಲಿ ಶಿಸ್ತಿರುವಂತೆ ಸೂಚಿಸಿದ್ದಾರೆ. ಅದರಂತೆ ಮುಂದೆಯೂ ನಮ್ಮ ಸಂಘಟನೆ ಶಕ್ತಿಯುತವಾಗಲಿದೆ. ನಾವು ತೆಗೆದುಕೊಂಡ ತೀರ್ಮಾನಗಳಿಗೆ ಬದ್ಧರಾಗಿರುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಮೈಸೂರು: ಇಂದಿನಿಂದ ಸ್ವಯಂ ಪ್ರೇರಿತ ಸಂಚಾರಿ ತಪಾಸಣಾ ಕೇಂದ್ರಗಳು ಆರಂಭ
ಅದರಂತೆ ಎಲ್ಲಾ ಸದಸ್ಯರು ಕೂಡ ಒಮ್ಮತದ ತೀರ್ಮಾನ ತೆಗೆದುಕೊಳ್ಳಬೇಕು. ಸಂಯುಕ್ತ ಕರ್ನಾಟಕ ರೈತಸಂಘ ವಿಸ್ತರಿಸಲು ಹಲವರನ್ನು ಸೇರಿಸಿಕೊಳ್ಳಲು ನಿರ್ಧರಿಸಿದ್ದೇವೆ. ದೆಹಲಿ ಮುಖಂಡರ ಜೊತೆಯೂ ಚರ್ಚೆಯಾಗಿದೆ. ನಾವು ರಾಜಕೀಯ ಪ್ರೇರಿತ ಸಂಘಟನೆಗಳ ಹೋರಾಟವನ್ನು ಖಂಡಿಸುತ್ತೇವೆ. ಎಲ್ಲಾ ರೈತ ಸಂಘಟನೆಗಳು ರಾಜಕೀಯ ಪ್ರೇರಿತಕ್ಕೆ ಒಳಗಾಗಬಾರದು. ಇದು ನಮ್ಮ ಮೂಲ ಉದ್ದೇಶ. ಆ ನಿಟ್ಟಿನಲ್ಲಿ ರೈತ ಸಂಘ ಮುಂದೆ ದಿಟ್ಟ ಹೆಜ್ಜೆ ಇಡಲಿದೆ ಎಂದರು.